AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಗಾಗಿ ಕಾಯುತ್ತಿದ್ದ ಕೋಗಿಲು ನಿವಾಸಿಗಳಿಗೆ ಬಿಗ್ ಶಾಕ್: ಸಿಡಿದೆದ್ದ ಹೋರಾಟ ಸಮಿತಿ

ಮನೆಗಾಗಿ ಕಾಯುತ್ತಿದ್ದ ಕೋಗಿಲು ನಿವಾಸಿಗಳಿಗೆ ಬಿಗ್ ಶಾಕ್: ಸಿಡಿದೆದ್ದ ಹೋರಾಟ ಸಮಿತಿ

ರಮೇಶ್ ಬಿ. ಜವಳಗೇರಾ
|

Updated on: Feb 17, 2026 | 4:39 PM

Share

ಕೋಗಿಲು ಲೇಔಟ್​​ (Kogilu layout) ನಿರಾಶ್ರಿತರು ಮನೆಗಾಗಿ ಕಾಯುತ್ತಿದ್ದರು. ಆದರೆ ಇದೀಗ ಮನೆ ಸಿಗುವುದು ಡೌಟ್​​ ಎನ್ನಲಾಗುತ್ತಿದೆ. ಯಾರಿಗೂ ಮನೆ ಕೊಡಕ್ಕೆ ಆಗಲ್ಲ ಅಂತ ಸಿಎಂ ಸಿದ್ದರಾಮಯ್ಯಗೆ ಅಧಿಕಾರಿಗಳು ತಿಳಿಸಿರುವ ಬಗ್ಗೆ ಮಾಹತಿ ಲಭ್ಯವಾಗಿದೆ. ಹೀಗಾಗಿ ಮನೆಗಾಗಿ ಕಾಯುತ್ತಿರುವ ಕೋಗಿಲು ಲೇಔಟ್​​ ನಿರಾಶ್ರಿತರಿಗೆ ಆಘಾತ ಎದುರಾಗಿದೆ. ಹೀಗಾಗಿ ಕೋಗಿಲು ಸ್ಲಂ ನಿವಾಸಿಗಳ ಹೋರಾಟ ಸಮಿತಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ.

ಬೆಂಗಳೂರು, (ಫೆಬ್ರವರಿ 17): ಕೋಗಿಲು ಲೇಔಟ್​​ (Kogilu layout) ನಿರಾಶ್ರಿತರು ಮನೆಗಾಗಿ ಕಾಯುತ್ತಿದ್ದರು. ಆದರೆ ಇದೀಗ ಮನೆ ಸಿಗುವುದು ಡೌಟ್​​ ಎನ್ನಲಾಗುತ್ತಿದೆ. ಯಾರಿಗೂ ಮನೆ ಕೊಡಕ್ಕೆ ಆಗಲ್ಲ ಅಂತ ಸಿಎಂ ಸಿದ್ದರಾಮಯ್ಯಗೆ ಅಧಿಕಾರಿಗಳು ತಿಳಿಸಿರುವ ಬಗ್ಗೆ ಮಾಹತಿ ಲಭ್ಯವಾಗಿದೆ. ಹೀಗಾಗಿ ಮನೆಗಾಗಿ ಕಾಯುತ್ತಿರುವ ಕೋಗಿಲು ಲೇಔಟ್​​ ನಿರಾಶ್ರಿತರಿಗೆ ಆಘಾತ ಎದುರಾಗಿದೆ. ಹೀಗಾಗಿ ಕೋಗಿಲು ಸ್ಲಂ ನಿವಾಸಿಗಳ ಹೋರಾಟ ಸಮಿತಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಕೋಗಿಲು ಸ್ಲಂ ನಿವಾಸಿಗಳ ಹೋರಾಟ ಸಮಿತಿ ಸಂಚಾಲಕಿ ಗೌರಮ್ಮ ಟಿವಿ9ಗೆ ಪ್ರತಿಕ್ರಿಯಿಸಿದ್ದು,
ಎಲ್ಲಾ ನಿರಾಶ್ರಿತರಿಗೆ ಮನೆ ಕೊಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಹೊಸ ವರ್ಷಕ್ಕೆ ಗಿಫ್ಟ್ ಕೊಡುತ್ತೇವೆ ಅಂತ ಭರವಸೆ ನೀಡಿತ್ತು. ವಿಪಕ್ಷಗಳು ಅಲ್ಲಿಗೆ ಹೋಗುವ ಸುಳ್ಳು ಆರೋಪ ಮಾಡಿದ್ದರು. ಕೊನೆಗೂ ಮೊದಲ ಹಂತದಲ್ಲಿ 26 ಕುಟುಂಬಗಳಿಗೆ ಮನೆ ಸಿಗುವ ಸಾಧ್ಯತೆ ಇತ್ತು . ಈಗ ಯಾರಿಗೂ ಮನೆ ಸಿಗಲ್ಲ, ಅರ್ಹರು ಯಾರೂ ಇಲ್ಲ ಎಂಬ ವದಂತಿ ಹರಿದಾಡುತ್ತಿದೆ.ನಾವು ಕೃಷ್ಣ ಬೈರೇಗೌಡ ಹಾಗೂ ಜಮೀರ್ ಅವರನ್ನು ಭೇಟಿ ಮಾಡಿದ್ದೆವು, ಆಗ ಸಕಾರಾತ್ಮಕವಾಗಿ ಸ್ಪಂದಿಸಿದರು. ಮನೆಗಳನ್ನು ಕೆಡವಿ ಎರಡು ತಿಂಗಳಾಗುತ್ತಾ ಬಂದರೂ ಯಾರಿಗೂ ಮನೆ ಸಿಕ್ಕಿಲ್ಲ.ಅಲ್ಲಿ ಯಾರೂ ಕೂಡ ಅಕ್ರಮ ವಾಸ ಮಾಡುತ್ತಿಲ್ಲ. ಪುನರ್ ವಸತಿ ಕೊಡೋದು ಸರ್ಕಾರದ ಜವಾಬ್ದಾರಿ . ಸರ್ಕಾರ ಕೊಟ್ಟ ಮಾತಿನಂತೆ ನಡೆಯದೆ ಹೋದರೆ ಹೋರಾಟ ಸಮಿತಿ ಸುಮ್ಮನೆ ಕೂರಲ್ಲ ಎಂದು ಎಚ್ಚರಿಕೆ ನೀಡಿದರು.

Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More