Kolar Bandh: ದತ್ತಮಾಲಾಧಾರಿಗಳ ಮೇಲೆ ಹಲ್ಲೆ ಖಂಡಿಸಿ ಕೋಲಾರ ಬಂದ್! 700 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಹೊಸ ಬಸ್ ನಿಲ್ದಾಣದಿಂದ ಹಿಂದೂ ಸಂಘಟನೆಗಳ ಱಲಿ ಅಮ್ಮವಾರಿ ಪೇಟೆ ಸರ್ಕಲ್, ಮೆಕ್ಕೆ ಸರ್ಕಲ್, ಕಾಲೇಜು ವೃತ್ತ ಮೂಲಕ ಮೆರವಣಿಗೆ ತೆರಳಿ ಎಂಜಿ ರಸ್ತೆಯಲ್ಲಿ ಸಮಾವೇಶ ನಡೆಯಲಿದೆ.

ಕೋಲಾರ: ದತ್ತಮಾಲಾಧಾರಿಗಳ ಮೇಲೆ ಹಲ್ಲೆ ಖಂಡಿಸಿ ಕೋಲಾರ ಬಂದ್ ಮಾಡಲಾಗಿದೆ. ಹಿಂದೂ ಸಂಘಟನೆಗಳ ಒಕ್ಕೂಟ ಬಂದ್​ಗೆ ಕರೆ ನೀಡಿದ್ದು, ಸಾವಿರಾರು ಕಾರ್ಯಕರ್ತರಿಂದ ಬೃಹತ್ ಮೆರವಣಿಗೆ ಆರಂಭವಾಗಿದೆ. ಹೊಸ ಬಸ್ ನಿಲ್ದಾಣದಿಂದ ಹಿಂದೂ ಸಂಘಟನೆಗಳ ರ್ಯಾಲಿ ಅಮ್ಮವಾರಿ ಪೇಟೆ ಸರ್ಕಲ್, ಮೆಕ್ಕೆ ಸರ್ಕಲ್, ಕಾಲೇಜು ವೃತ್ತ ಮೂಲಕ ಮೆರವಣಿಗೆ ತೆರಳಿ ಎಂಜಿ ರಸ್ತೆಯಲ್ಲಿ ಸಮಾವೇಶ ನಡೆಯಲಿದೆ. ಯಾವುದೇ ಅಹಿತರಕರ ಘಟನೆ ನಡೆಯದಂತೆ ಕೋಲಾರ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಸ್​ಪಿ ಕಿಶೋರ್ ಬಾಬು ಹಾಗೂ ಡಿಸಿ ಡಾ.ಆರ್.ಸೆಲ್ವಮಣಿ ಸೇರಿ ಕೆಲ ಅಧಿಕಾರಿಗಳು ನಗರದಾದ್ಯಂತ ಸಂಚಾರ ಮಾಡುತ್ತಿದ್ದಾರೆ.

ಬಂದ್ ಹಿನ್ನೆಲೆ ಕೋಲಾರದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ ಕೋಲಾರ, ಕೆಜಿಎಫ್, ಬೆಂಗಳೂರು ಗ್ರಾಮಾಂತರ, ಹಾಗೂ ತುಮಕೂರು ಜಿಲ್ಲೆಯಿಂದ‌ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸುಮಾರು 700 ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

ಘಟನೆ ಏನು?
ದತ್ತ ಮಾಲಾಧಾರಿಗಳು ಚಿಕ್ಕಮಗಳೂರಿನ ಬಾಬಾಬುಡ್ಡನಗಿರಿಯ ದತ್ತಪೀಠಕ್ಕೆ ಹೊರಟಿದ್ದರು. ಈ ವೇಳೆ ಕೋಲಾರದಲ್ಲಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ನವೆಂಬರ್ 13ರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಕೋಲಾರದ ಶ್ರೀರಾಮ ಸೇನೆ ಕಾರ್ಯಕರ್ತರು ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಒಂದು ಮಿನಿ ಬಸ್​ನಲ್ಲಿ ಹೊರಟಿದ್ದರು. ಬಸ್​ನಲ್ಲಿ ಜೈ ಶ್ರೀರಾಮ್ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿಕೊಂಡು ಹೋಗುತ್ತಿದ್ದರು. ಈ ವೇಳೆ ಕೋಲಾರದ ಕ್ಲಾಕ್ ಟವರ್ ಬಳಿಯ ವಿಶಾಲ್ ಮಾರ್ಟ್ ಎದುರು ಏಕಾಏಕಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ವಿಶಾಲ್ ಮಾರ್ಟ್ ಎದುರು ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ನಡೆದು, ವಸೀಂಬೇಗ್ ಎಂಬುವವರಿಗೆ ರೌಡಿ ಶೀಟರ್​ಗಳಾದ ಅಕ್ಬರ್, ಎಜಾಜ್ ಮತ್ತು ಜುಮ್ಮು ಎಂಬುವವರಿಂದ ಚಾಕು ಇರಿತವಾಗಿತ್ತು. ಈ ಸಂಬಂಧ ಮೂರು ಜನಕ್ಕೆ ಗಾಯಗಳಾಗಿ ಎಲ್ಲರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸ್ಥಳದಲ್ಲಿ ಮಾತ್ರ ಜನರು ಗುಂಪು ಗುಂಪಾಗಿ ಹಾಗೆಯೇ ನಿಂತಿದ್ದರು. ಈ ವೇಳೆ ಘೋಷಣೆಗಳನ್ನು ಕೂಗುತ್ತಾ ದತ್ತಮಾಲಾಧಾರಿಗಳಿದ್ದ ಬಸ್ ಅದೇ ಮಾರ್ಗವಾಗಿ ತೆರಳುತ್ತಿತ್ತು. ಆಗ ಅಲ್ಲಿದ್ದ ಕೆಲವು ಕಿಡಿಗೇಡಿಗಳು ಇದ್ದಕ್ಕಿದಂತೆ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಅಲ್ಲದೆ ಬಸ್ ಅಡ್ಡಗಟ್ಟಿದ್ದರು.

ಇದನ್ನೂ ಓದಿ

ಸರ್ಕಾರವನ್ನು ಟೀಕಿಸುವವರು ಮತ್ತು ಹೋರಾಟಗಾರರ ಟ್ವಿಟರ್ ಖಾತೆ ಮೇಲೆ ತ್ರಿಪುರಾ ಪೊಲೀಸ್ ನಿಗಾ

ಬೆಳ್ಳಿಗಜ್ಜೆಗಾಗಿ ಮಹಿಳೆಯರ ಪಾದವನ್ನೇ ಕತ್ತರಿಸಿ, ಹತ್ಯೆ ಮಾಡುವ ಸೈಕೋಗಾಗಿ ಹುಡುಕಾಟ; ಎರಡನೇ ಘಟನೆಯ ಬೆನ್ನಲ್ಲೇ ಚುರುಕಾದ ಪೊಲೀಸರು

Click on your DTH Provider to Add TV9 Kannada