ನಾವಾಡುವ ಮಾತಿನ ಮೇಲೆ ಹಿಡಿತವಿರಬೇಕು, ಮಾತುಗಳು ನಮ್ಮ ವ್ಯಕ್ತಿತ್ವದ ಪ್ರತಿಬಿಂಬ ಆಗಿವೆ: ಡಾ ಸೌಜನ್ಯ ವಶಿಷ್ಠ
ಮನಸ್ಸಿನಲ್ಲಿ ಸಕಾರಾತ್ಮಕವಲ್ಲದ ಅಲೋಚನೆಗಳು ಮನೆ ಮಾಡಿಕೊಂಡಿದ್ದರೆ ಅದು ನಮ್ಮ ವರ್ತನೆಯಲ್ಲಿ ಪ್ರತಿಬಿಂಬಗೊಳ್ಳುತ್ತದೆ ಎಂದು ಸೌಜನ್ಯ ಹೇಳುತ್ತಾರೆ.
ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಅವರು ಇವತ್ತಿನ ಸಂಚಿಕೆಯಲ್ಲಿ ನಾವಾಡುವ ಮಾತುಗಳಲ್ಲಿನ ಪವರ್ ಬಗ್ಗೆ ಹೇಳಿದ್ದಾರೆ. ಸಾಮಾನ್ಯವಾಗಿ ನಮ್ಮ ಮನಸ್ಸಿನ ಅಲೋಚನೆಗಳೇ ಶಬ್ದಗಳ ರೂಪದಲ್ಲಿ ಹೊರಬರುತ್ತವೆ. ಆಲೋಚನೆಗಳು ಉತ್ತಮವಾಗಿದ್ದರೆ ನಾವಾಡುವ ಮಾತು ಸಹ ಚೆನ್ನಾಗಿರುತ್ತದೆ, ಕೆಟ್ಟ ಆಲೋಚನೆ ಕೆಟ್ಟ ಮಾತುಗಳಿಗೆ ದಾರಿ ಮಾಡುತ್ತದೆ. ಹಾಗೆಯೇ ನಾವು ಯಾವುದರ ಬಗ್ಗೆ ಆಲೋಚಿಸುತ್ತಿರುತ್ತೇವೆಯೋ ನಮ್ಮ ಫೋಕಸ್ ಕೂಡ ಅದೇ ವಿಷಯದ ಮೇಲೆ ಕೇಂದ್ರೀಕೃತವಾಗಿರುತ್ತದೆ. ನಮ್ಮ ಅಲೋಚನಗಳಲ್ಲಿ ಒಂದು ಬಗೆಯ ವೈಬ್ರೇಶನ್ ಇರುತ್ತದೆ. ಹಾಗಾಗಿ, ನೆಗೆಟಿವ್ ಆಲೋಚನೆಗಳಿಂದ ದೂರ ಇರಬೇಕು ಅಂತ ಸೌಜನ್ಯ ಹೇಳುತ್ತಾರೆ.
ಮನಸ್ಸಿನಲ್ಲಿ ಸಕಾರಾತ್ಮಕವಲ್ಲದ ಅಲೋಚನೆಗಳು ಮನೆ ಮಾಡಿಕೊಂಡಿದ್ದರೆ ಅದು ನಮ್ಮ ವರ್ತನೆಯಲ್ಲಿ ಪ್ರತಿಬಿಂಬಗೊಳ್ಳುತ್ತದೆ ಎಂದು ಸೌಜನ್ಯ ಹೇಳುತ್ತಾರೆ. ನಮ್ಮ ಬಗ್ಗೆ ಯಾರಾದರೂ ಉತ್ತಮ ಕಾಮೆಂಟ್ ಮಾಡಿದಾಗ ಅದನ್ನು ಉಡಾಫೆ ಮಾಡುವುದನ್ನು ಒಬ್ಬ ಬಡ ಮನುಷ್ಯನ ಮನಸ್ಥಿತಿಗೆ ಹೋಲಿಸಲಾಗುತ್ತದೆ. ನಮ್ಮ ಬಗ್ಗೆ ನಮ್ಮಲ್ಲೇ ಆತ್ಮವಿಶ್ವಾಸವಿಲ್ಲದೆ ಹೋದರೆ ಅದು ಪೂರ್ ಮ್ಯಾನ್ಸ್ ಮೈಂಡ್ಸೆಟ್ ಅನಿಸಿಕೊಳ್ಳುತ್ತದೆ. ನಮ್ಮಲ್ಲಿ ಆತ್ಮವಿಶ್ವಾಸದ ಜೊತೆ ಮನಸ್ಥೈರ್ಯವೂ ಇರಬೇಕು.
ನಮ್ಮನ್ನು ನಾವು ಮೆಚ್ಚಿಕೊಳ್ಳದಿದ್ದರೆ ಬೇರೆಯವರು ಹೇಗೆ ನಮ್ಮನ್ನು ಮೆಚ್ಚಿಯಾರು ಅಂತ ಡಾ ಸೌಜನ್ಯ ಪ್ರಶ್ನಿಸುತ್ತಾರೆ. ಪ್ರತಿಯೊಬ್ಬರಿಗೆ ಅವರದ್ದೇ ಆದ ವ್ಯಕ್ತಿತ್ವ ಇರುತ್ತದೆ. ಅದರ ಬಗ್ಗೆ ಅವರು ಹೆಮ್ಮೆ ಪಡಬೇಕು.
ನಮ್ಮ ಮಾತಿನ ಮೇಲೆ ಹಿಡಿತವಿರಬೇಕು, ಅದರಲ್ಲೂ ವಿಶೇಷವಾಗಿ ಮಕ್ಕಳ ಮುಂದೆ ಮಾತಾಡುವಾಗ ಬಹಳ ಎಚ್ಚರದಿಂದರಬೇಕು. ನಾವು ಮಾತಾಡುವುದನ್ನು ಅವರು ಅನುಕರಿಸುತ್ತಾರೆ.
ನಮ್ಮ ಜೊತೆ ಯಾರಾದರೂ ಮಾತಾಡಿದಾಗ ನೆಗೆಟಿವ್ ಟೋನಲ್ಲಿ ಪ್ರತಿಕ್ರಿಯಿಸಬಾರದು. ನಮ್ಮ ದೈನಂದಿನ ಬದುಕಿನಲ್ಲಿ ನಡೆಯುವ 5 ಒಳ್ಳೆಯ ಅಂಶಗಳನ್ನು ಜನರೊಂದಿಗೆ ಹಂಚಿಕೊಳ್ಳಬೇಕು. ಅದು ಒಳ್ಳೆ ಊಟವಾಗಿರಬಹುದು, ಸಿನಿಮಾ ಅಗಿರಬಹುದು, ಹೆಂಡತಿ ಮಾಡಿಕೊಟ್ಟ ಕಾಫೀ ಆಗಿರಬಹುದು ಅಥಾವಾ ಬೇರೆ ಯಾವುದೆ ಒಳ್ಳೆಯ ಅಂಶವಾಗಿರಬಹುದು. ನಾವು ಖುಷಿಯಾಗಿದ್ದರೆ ಅದು ನಮ್ಮ ಮೂಲಕ ಬೇರೆಯವರಿಗೆ ರೇಡಿಯೇಟ್ ಆಗುತ್ತೆ ಅಂತ ಡಾ ಸೌಜನ್ಯ ಹೇಳುತ್ತಾರೆ.
ಇದನ್ನೂ ಓದಿ: ಬೊಂಬೆ ಹೇಳುತೈತೆ ಹಾಡಿನ ಮುಖಾಂತರ ಪುನೀತ್ಗೆ ನಮನ ಸಲ್ಲಿಸಿದ 50ಕ್ಕೂ ಹೆಚ್ಚು ಪುಟಾಣಿಗಳು; ವಿಡಿಯೋ ನೋಡಿ