ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ

Updated By: Ganapathi Sharma

Updated on: Dec 13, 2025 | 11:36 AM

ಕೋಲಾರ ಜಿಲ್ಲೆಯ ಕೊಂಡರಾಜನಹಳ್ಳಿ ಗೇಟ್ ಬಳಿ ಶನಿವಾರ ಬೆಳ್ಳಂಬೆಳಗ್ಗೆ ಸರಣಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್, ಸಾವು-ನೋವು ಸಂಭವಿಸಿಲ್ಲ. ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾದ ಕಾರಣ ಅಪಘಾತ ಸಂಭವಿಸಿದೆ. ಹಿಂದಿನಿಂದ ಬಂದ ಕಾರುಗಳು ಸಹ ಡಿಕ್ಕಿಹೊಡೆದಿವೆ. ಘಟನಾ ಸ್ಥಳದಲ್ಲಿನ ವಿಡಿಯೋ ಇಲ್ಲಿದೆ.

ಕೋಲಾರ, ಡಿಸೆಂಬರ್ 13: ಕೋಲಾರ ಜಿಲ್ಲೆಯ ಕೊಂಡರಾಜನಹಳ್ಳಿ ಗೇಟ್ ಬಳಿ ಬಸ್ ಹಾಗೂ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಖಾಸಗಿ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ, ಬಸ್ ಹಿಂದೆ ಬರುತ್ತಿದ್ದ ಎರಡು ಕಾರುಗಳೂ ಪರಸ್ಪರ ಡಿಕ್ಕಿಯಾಗಿವೆ. ಅಪಘಾತದಿಂದ ವಾಹನಗಳಿಗೆ ಹಾನಿಯಾದರೂ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಂಚಾರ ಸುಗಮಗೊಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ