ಕೋಲಾರ: ಪತಿಯನ್ನು ಎಂಎಲ್ಎ ಮಾಡುವಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಪತ್ನಿಯ ಹರಕೆ ಪತ್ರ
ಮಹಿಳೆ ಪತಿಯನ್ನು ಎಂಎಲ್ಎ ಮಾಡುವಂತೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಗ್ರಾಮ ದೇವತೆ ಮಾರಿಕಾಂಬಾ ದೇವಿಗೆ ಹರಕೆ ಪತ್ರ ಸಲ್ಲಿಸಿದ್ದಾರೆ.
ಕೋಲಾರ: ಇತ್ತೀಚಿನ ದಿನಗಳಲ್ಲಿ ಭಕ್ತರು ದೇವರಲ್ಲಿ ವಿಚಿತ್ರವಾದ ಹರಕೆಗಳನ್ನು ಮೊರೆ ಇಡುತ್ತಾರೆ. ಇತ್ತೀಚಿಗೆ ವಧು ಒಬ್ಬಳು ದೇವರಲ್ಲಿ ವಿಚಿತ್ರವಾದ ಹರಕೆ ಪತ್ರ ದೇವರ ಹುಂಡಿಯಲ್ಲಿ ಹಾಕುವ ಮುಖಾಂತರ ಸಾಕಷ್ಟು ಸುದ್ದಿಯಗಿದ್ದಳು. ಈಗ ಮಹಿಳೆ ಪತಿಯನ್ನು ಎಂಎಲ್ಎ ಮಾಡುವಂತೆ ಮಾರಿಕಾಂಬಾ ದೇವಿಗೆ ಹರಕೆ ಪತ್ರ ಸಲ್ಲಿಸಿದ್ದಾರೆ. ಮಾಲೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್ ಪತ್ನಿ ಶ್ವೇತಾ ಅವರು ಜಿಲ್ಲೆಯ ಮಾಲೂರು ಪಟ್ಟಣದ ಗ್ರಾಮ ದೇವತೆ ಮಾರಿಕಾಂಬಾ ದೇವಿಗೆ ಹರಕೆ ಸಲ್ಲಿಸಿದರು. ಮಾರಿಕಾಂಬಾ ದೇವಿಗೆ ಭಕ್ತಿಯಿಂದ ಹರಕೆ ಹೊತ್ತರೆ ಎಲ್ಲವೂ ನೆರವೇರುತ್ತೆ ಅನ್ನೊ ಪ್ರತೀತಿ ಇದೆ. ಶ್ವೇತಾ ಹೂಡಿ ವಿಜಯ್ ಕುಮಾರ್ ಹರಕೆಯಂದು ನೂರಾರು ಮಹಿಳೆಯರಿಗೆ ಅರಿಶಿನ- ಕುಂಕುಮ, ಸೀರೆ ನೀಡಿದ್ದಾರೆ.
ಇದಲ್ಲದೆ ಶ್ವೇತಾ ಹೂಡಿ ವಿಜಯ್ ಕುಮಾರ್ ಪತಿಗೆ ಮಾಲೂರು ತಾಲೂಕಿನ ಸೇವೆ ಮಾಡುವ ಅವಕಾಶ ಕರುಣಿಸಿ ಎಂದು ಸೊಣ್ಣಪ್ಪನಹಟ್ಟಿ ಗ್ರಾಮದಲ್ಲಿ ಬಯಲು ಬಸವೇಶ್ವರ ಸ್ವಾಮಿಗೆ ಹರಕೆ ಹೊತ್ತು ತೇರಿನ ಮೇಲೆ ಬಾಳೆ ಹಣ್ಣು ಎಸೆದು ಹರಕೆ ಕಟ್ಟಿಕೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ