ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಕೂಟಗಲ್ ಬೆಟ್ಟ; ವೀಕೆಂಡ್ ಟ್ರಿಪ್​ಗೆ ಹೇಳಿ ಮಾಡಿಸಿದ ಜಾಗಕ್ಕೆ ಒಮ್ಮೆ ಭೇಟಿ ನೀಡಿ

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಕೂಟಗಲ್ ಬೆಟ್ಟ; ವೀಕೆಂಡ್ ಟ್ರಿಪ್​ಗೆ ಹೇಳಿ ಮಾಡಿಸಿದ ಜಾಗಕ್ಕೆ ಒಮ್ಮೆ ಭೇಟಿ ನೀಡಿ

TV9 Web
| Updated By: preethi shettigar

Updated on: Nov 16, 2021 | 2:56 PM

ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕೂದಲಳತೆ ದೂರದಲ್ಲಿರುವ ರಾಮನಗರ ತಾಲೂಕಿನ ಕೂಟಗಲ್ ಬೆಟ್ಟ ಇದೀಗ ಪ್ರವಾಸಿಗರನ್ನು ತನ್ನತ್ತ ಕೈ ಬಿಸಿ ಕರೆಯುತ್ತಿದೆ. ಬೆಟ್ಟದ ಸುತ್ತಲು ಹಚ್ಚಹಸಿರು ಹಾಸುಹೊದ್ದಿ ನಿಂತಿದೆ. ಹೀಗಾಗಿ ಇದು ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಆದರೆ ಈ ಸ್ಥಳದ ಬಗ್ಗೆ ಎಷ್ಟೋ ಜನರಿಗೆ ಗೊತ್ತೆ ಇಲ್ಲ.

ರಾಮನಗರ: ಅದು ಸಾಕಷ್ಟು ಐತಿಹಾಸಿಕವಾದ, ಪುರಾಣ ಪ್ರಸಿದ್ದವಾದ ಸ್ಥಳ. ಇದು  ಪ್ರವಾಸಿಗರಿಗೆ (Tourists) ಹೇಳಿ ಮಾಡಿಸಿದಂತ ಸ್ಥಳ. ಆದರೆ ಈ ಸ್ಥಳದ ಬಗ್ಗೆ ಎಷ್ಟೋ ಮಂದಿ ಪ್ರವಾಸಿಗರಿಗೆ ಗೊತ್ತೆ ಇಲ್ಲ. ಸಿಲಿಕಾನ್ ಸಿಟಿ ಪಕ್ಕದಲ್ಲಿ ಇದ್ದರೂ, ಅಭಿವೃದ್ದಿವೆಂಬುದು ಶೂನ್ಯ.  ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕೂದಲಳತೆ ದೂರದಲ್ಲಿರುವ ರಾಮನಗರ ತಾಲೂಕಿನ ಕೂಟಗಲ್ ಬೆಟ್ಟ(Kootagal Hill) ಇದೀಗ ಪ್ರವಾಸಿಗರನ್ನು ತನ್ನತ್ತ ಕೈ ಬಿಸಿ ಕರೆಯುತ್ತಿದೆ. ಬೆಟ್ಟದ ಸುತ್ತಲು ಹಚ್ಚಹಸಿರು ಹಾಸುಹೊದ್ದಿ ನಿಂತಿದೆ. ಹೀಗಾಗಿ ಇದು ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಆದರೆ ಈ ಸ್ಥಳದ ಬಗ್ಗೆ ಎಷ್ಟೋ ಜನರಿಗೆ ಗೊತ್ತೆ ಇಲ್ಲ. ಈ ಸ್ಥಳವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾರ್ಪಡಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಹಿಂದೆ ಉಳಿದಿದೆ.

ರಾಮನಗರ ತಾಲೂಕಿನ ಈ ಕೂಟಗಲ್ ಬೆಟ್ಟ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಬೆಟ್ಟದ ಪಕ್ಕದಲ್ಲಿಯೇ ತಿಮ್ಮಪ್ಪ ಸ್ವಾಮಿಯ ದೇವಸ್ಥಾನ ಕೂಡ ಇದೆ.  ಆದರೆ ಕೆಲವಷ್ಟು ಅವಸ್ಥೆಯ ಆಗರ ಕೂಡ ಆಗಿದೆ. ಬೆಟ್ಟದ ಬಳಿ ಯಾವುದೇ ರಕ್ಷಣೆ ಸೌಕರ್ಯಗಳು ಇಲ್ಲ. ರಸ್ತೆ ಅಭಿವೃದ್ಧಿ ಪಡಿಸಿರುವುದು ಬಿಟ್ಟರೇ ಬೇರೆ ಏನು ಇಲ್ಲದಂತೆ ಆಗಿದೆ. ಬಂದಂತಹ ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಇನ್ನು ರಾತ್ರಿ ಆಯ್ತು ಅಂದರೆ ಸಾಕು, ಇದು ಕುಡುಕರ ಅಡ್ಡೆಯಾಗಿ ಮಾರ್ಪಡುತ್ತದೆ. ಹೀಗಾಗಿ ಈ ಸ್ಥಳಕ್ಕೆ ಮೂಲ ಸೌಕರ್ಯಗಳನ್ನು ಒದಗಸಿ ಪ್ರವಾಸಿತಾಣವನ್ನಾಗಿ ಮಾಡಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ:

ಉತ್ತರ ಕನ್ನಡ: ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ ಐಎನ್ಎಸ್ ಚಾಪೆಲ್ ಯುದ್ಧನೌಕೆ; ದುರಸ್ತಿಗೆ ಸ್ಥಳೀಯರಿಂದ ಮನವಿ

ಯಾದಗಿರಿ: ಮೈದುಂಬಿ ಹರಿಯುವ ಗವಿ ಫಾಲ್ಸ್​ ಜತೆಗೆ ಗವಿ ಸಿದ್ದಲಿಂಗೇಶ್ವರ ದೇವರ ದರ್ಶನ ಪಡೆಯಿರಿ