ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ ಬೋರ್ವೆಲ್ ಕೊರೆಸಿದ ರೈತ
ಶ್ರೀಮಂತಿಕೆ ಇಲ್ಲದಿದ್ದರೇನಂತೆ, ಮನಸ್ಸಿನಲ್ಲಿ ಉದಾರ ಗುಣ ಇದ್ದರೆ. ಕೊಪ್ಪಳದ ಯುವ ರೈತನೊಬ್ಬ ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ ಬೋರ್ವೆಲ್ ಕೊರೆಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಬಡ ರೈತನಾದರೂ ಸರ್ಕಾರಿ ಶಾಲೆ ಮಕ್ಕಳ ನೆರವಿಗೆ ಧಾವಿಸಿರುವ ಮಹಾಂತೇಶಗೌಡ ಪೊಲೀಸ್ ಪಾಟೀಲ್ ಬಗ್ಗೆ ಇದೀಗ ವ್ಯಾಪಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೊಪ್ಪಳ, ಜನವರಿ 21: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಕೊರತೆ ಎದುರಾದ ಕಾರಣ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕೊಮಲಾಪುರ ಗ್ರಾಮದ ರೈತ ಮಹಾಂತೇಶಗೌಡ ಪೊಲೀಸ್ ಪಾಟೀಲ್ ಎಂಬವರು ಸ್ವಂತ ಹಣದಲ್ಲಿ ಬೋರ್ವೆಲ್ ಮಾಡಿಸಿಕೊಟ್ಟಿದ್ದಾರೆ. 35 ಸಾವಿರ ರೂಪಾಯಿಗಿಂತಲೂ ಹೆಚ್ಚು ಹಣ ಖರ್ಚು ಮಾಡಿ ಕೊಳವೆ ಬಾವಿ ಕೊರೆಯಿಸಿದ್ದಾರೆ.
ಬಡ ರೈತನಾದ್ರೂ ಮಹಾಂತೇಶಗೌಡ ಪೊಲೀಸ್ ಪಾಟೀಲ್ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಕೃಷಿಕ ಯುವಕನ ಕಾರ್ಯಕ್ಕೆ ಗ್ರಾಮಸ್ಥರಿಂದ ವ್ಯಾಪಕ ಮೆಚ್ಚುಗೆ, ಶ್ಲಾಘನೆ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ