ಕೊವಿಡ್ ಸಾವಿನ ಸಂಖ್ಯೆಯಲ್ಲಿ ಮಹಾ ಎಡವಟ್ಟು ಬಯಲು ಮಾಡಿದ ಕೊಪ್ಪಳ ಜಿಲ್ಲಾಧಿಕಾರಿ
91 ಜನರ ಸಾವಿನ ಮಾಹಿತಿ ನಮಗೆ ಸಿಕ್ಕಿಲ್ಲವೆಂದು ತಿಳಿಸಿದ ಜಿಲ್ಲಾಧಿಕಾರಿ, ಅದರಲ್ಲಿ ಕೆಲವರು ಬೇರೆ ಬೇರೆ ಜಿಲ್ಲೆಯವರಿದ್ದಾರೆ. ಕೆಲವರು ಪರಿಹಾರ ಬೇಡ ಅಂದಿದ್ದಾರೆ. ಕೆಲವರ ಹೆಸರುಗಳು 2 ಬಾರಿ ದಾಖಲಾಗಿದೆ.
ಕೊಪ್ಪಳ ಜಿಲ್ಲಾಧಿಕಾರಿ ಕೊವಿಡ್ ಸಾವಿನ ಸಂಖ್ಯೆಯಲ್ಲಾದ ಮಹಾ ಎಡವಟ್ಟನ್ನು ಬಯಲು ಮಾಡಿದ್ದಾರೆ. 23 ಜನ ಜೀವಂತವಿದ್ದರೂ, ಕೊರೊನಾಗೆ ಬಲಿ ಅಂತ ಅಧಿಕಾರಿಗಳು ಲೆಕ್ಕ ನೀಡಿದ್ದಾರೆ. ಆರೋಗ್ಯ ಅಧಿಕಾರಿಗಳ ಎಡವಟ್ಟನ್ನು ಕೊಪ್ಪಳ ಡಿಸಿ ಸದ್ಯ ಬಯಲು ಮಾಡಿದ್ದಾರೆ. ಜಿಲ್ಲೆಯಲ್ಲಿ ಕೊವಿಡ್ನಿಂದ ಮೃತಪಟ್ಟವರಿಗೆ ಪರಿಹಾರ ನೀಡಲು ಸಿದ್ಧಪಡಿಸಿದ ಅಂಕಿ ಅಂಶಗಳಲ್ಲಿ ಆರೋಗ್ಯ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ, ಕೊವಿಡ್ನಿಂದ 517 ಜನರ ಸಾವನ್ನಪ್ಪಿದ್ದಾರೆ. ಈ ಪೈಕಿ 371 ಮೃತರ ಕುಟುಂಬಗಳಿಗೆ ಪರಿಹಾರ ನೀಡಲು ದಾಖಲಾತಿ ಸಂಗ್ರಹಿಸಲಾಗುತ್ತಿದೆ. 91 ಜನರ ಸಾವಿನ ಬಗ್ಗೆ ಮಾಹಿತಿ ಸಿಕ್ಕಿಲ್ಲ ಅಂತ ಅವರು ತಿಳಿಸಿದ್ದಾರೆ.
91 ಜನರ ಸಾವಿನ ಮಾಹಿತಿ ನಮಗೆ ಸಿಕ್ಕಿಲ್ಲವೆಂದು ತಿಳಿಸಿದ ಜಿಲ್ಲಾಧಿಕಾರಿ, ಅದರಲ್ಲಿ ಕೆಲವರು ಬೇರೆ ಬೇರೆ ಜಿಲ್ಲೆಯವರಿದ್ದಾರೆ. ಕೆಲವರು ಪರಿಹಾರ ಬೇಡ ಅಂದಿದ್ದಾರೆ. ಕೆಲವರ ಹೆಸರುಗಳು 2 ಬಾರಿ ದಾಖಲಾಗಿದೆ. ಹೀಗಾಗಿ 91 ಜನರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. 23 ಜನ ಡಿಸ್ಚಾರ್ಜ್ ಆಗಿರುವುದನ್ನ ಸಾವನ್ನಪ್ಪಿದ್ದಾರೆ ಆರೋಗ್ಯ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ ಎಂದು ಡಿಸಿ ಹೇಳಿದ್ದಾರೆ.