ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 31, 2024 | 7:07 PM

2024ಕ್ಕೆ ಗುಡ್ ಬಾಯ್ ಹೇಳಿ 2025ಕ್ಕೆ ಹಾಯ್ ಹೇಳುವ ಸಂದರ್ಭ ಬಂದಿದೆ. ಈ ಸಮಯದಲ್ಲಿ ಕೊಪ್ಪಳ ತಾಲ್ಲೂಕಿನ ಗಿಣಗೇರಿ ಕೆರೆಯ ಬಳಿ ಟಿವಿ9 ಕ್ಯಾಮರಾಮ್ಯಾನ್ ಮಾರುತಿ ಅವರು ಈ ವರ್ಷದ ಕೊನೆಯ ಸೂರ್ಯಾಸ್ತದ ಅದ್ಭುತ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ನಸುಗೆಂಪು ಬಣ್ಣದಲ್ಲಿ ಹೊಳೆಯುತ್ತಿದ್ದ ಸೂರ್ಯನು ನಿಧಾನವಾಗಿ ಅಡಗುವುದು ಮನಮೋಹಕ ದೃಶ್ಯ ಕಣ್ಮನ ಸೆಳೆಯುತ್ತದೆ.

ಕೊಪ್ಪಳ, ಡಿಸೆಂಬರ್​ 31: ಹೊಸ ವರ್ಷಾಚರಣೆಗೆ (New Year) ಕೌಂಟ್ ಡೌನ್​ ಶುರುವಾಗಿದೆ. ಈ ವರ್ಷದ ಕೊನೆಯ ಸೂರ್ಯಾಸ್ತದ ಮನಮೋಹಕ ದೃಶ್ಯವನ್ನು ಟಿವಿ9 ಕ್ಯಾಮರಾಮ್ಯಾನ್ ಮಾರುತಿ ಸೆರೆಹಿಡಿದಿದ್ದಾರೆ. ಕೊಪ್ಪಳ ತಾಲೂಕಿನ ಗಿಣಗೇರಿ ಕೆರೆ ಬಳಿ ಈ ಮನಮೋಹಕ ದೃಶ್ಯಗಳು ಕಂಡುಬಂತು. ನಸುಗೆಂಪು ಬಣ್ಣದಲ್ಲಿ ಸೂರ್ಯ ಹೊಳೆಯುತ್ತಿದ್ದಾನೆ. ಬಳಿಕ ಸಂಜೆಯಾಗುತ್ತಿದ್ದಂತೆ ಸೂರ್ಯ ನಿಧಾನವಾಗಿ ಮಾಯವಾಗಿದ್ದು ಹೀಗೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.