ಕೊಪ್ಪಳ: ಸಾಯುತ್ತಿವೆ ನೂರಾರು ಕೋಳಿಗಳು, ನಿಗೂಢ ರೋಗದ ಶಂಕೆ

Edited By:

Updated on: Sep 05, 2025 | 7:47 AM

ಕೊಪ್ಪಳದಲ್ಲಿ ಕೋಳಿಗಳಿಗೆ ನಿಗೂಢ ರೋಗ ತಗುಲಿರುವ ಶಂಕೆ ವ್ಯಕ್ತವಾಗಿದೆ. ಫಾರ್ಮ್​ ಒಂದರಲ್ಲಿ ನೂರಾರು ಕೋಳಿಗಳು ನಿಗೂಢವಾಗಿ ಮೃತಪಟ್ಟಿದ್ದು, ಅವುಗಳನ್ನು ಕೆರೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಎಸೆಯಲಾಗಿರುವುದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಹಕ್ಕಿಜ್ವರದ ಆತಂಕವೂ ಕೊಪ್ಪಳದ ಜನರಲ್ಲಿ ವ್ಯಕ್ತವಾಗಿದ್ದು, ಫಾರ್ಮ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕೊಪ್ಪಳ, ಸೆಪ್ಟೆಂಬರ್ 5: ಕೊಪ್ಪಳ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ಕೋಳಿಗಳಿಗೆ ನಿಗೂಢ ರೋಗ ಹಬ್ಬಿದ್ದು, ನೂರಾರು ಕೋಳಿಗಳು ಸಾವನ್ನಪ್ಪಿವೆ. ಮತ್ತೊಂದೆಡೆ, ಹಕ್ಕಿ ಜ್ವರದ ಅನುಮಾನವೂ ವ್ಯಕ್ತವಾಗಿದೆ. ಫಾರ್ಮ್​​ನಲ್ಲಿ ಮೃತಪಟ್ಟಿರುವ ನೂರಾರು ಕೋಳಿಗಳನ್ನು ಸಿಬ್ಬಂದಿ ಕೆರೆಯ ಬಳಿ ಬಿಸಾಡಿ ಹೋಗಿರುವುದು ಕಂಡುಬಂದಿದೆ. ಸತ್ತ ಕೋಳಿಗಳನ್ನು ಮಣ್ಣಿನಲ್ಲಿ ಮುಚ್ಚಿ ಹಾಕುವ ಬದಲು ಎಸೆದು ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ ಗ್ರಾಮಸ್ಥರು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಿಸುತ್ತಿದ್ದಾರೆ. ಮೃತಪಟ್ಟ ಕೋಳಿಗಳನ್ನು ಎಸೆದು ಹೋಗಿರುವ ಫಾರ್ಮ್​​ನ ವಿರುದ್ಧ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ