ಕೊಪ್ಪಳ: ದೀಪಾವಳಿ ಹಬ್ಬದ ಪ್ರಯುಕ್ತ ಅಂಜನಾದ್ರಿಯಲ್ಲಿ ಹನುಮನಿಗೆ ವಿಶೇಷ ಪೂಜೆ; ವಿಡಿಯೋ ನೋಡಿ
ಕೊಪ್ಪಳ ಜಿಲ್ಲೆಯ ಗಂಗಾವತಿ ಬಳಿಯ ಅಂಜನಾದ್ರಿ ಬೆಟ್ಟದಲ್ಲಿ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಹನುಮ ಜನ್ಮಸ್ಥಳ ಎಂದೇ ಪ್ರಸಿದ್ಧವಾಗಿರುವ ಈ ಕ್ಷೇತ್ರದಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ಆಂಜನೇಯನಿಗೆ ಪ್ರಧಾನ ಅರ್ಚಕ ವಿದ್ಯಾದಾಸಬಾಬಾ ನೇತೃತ್ವದಲ್ಲಿ 101 ತೆಂಗಿನಕಾಯಿಯ ಎಳನೀರು ಅಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿಸಿದ್ದಾರೆ.
ಕೊಪ್ಪಳ, ಅಕ್ಟೋಬರ್ 21: ಆಂಜನೇಯ ಜನ್ಮಸ್ಥಳ ಎಂದೇ ಪ್ರಸಿದ್ದಿ ಪಡೆದಿರುವ ಜಿಲ್ಲೆಯ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೀಪಾವಳಿ (Deepavali) ಹಬ್ಬ ಆಚರಣೆ ಮಾಡಲಾಯಿತು. ಅರ್ಚಕರಿಂದ ಆಂಜನೇಯನಿಗೆ 101 ತೆಂಗಿನಕಾಯಿ ಎಳನೀರಿನ ಅಭಿಷೇಕ ಮಾಡಲಾಯಿತು. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
