ಕೊಪ್ಪಳ; ಮುರಡಬಸವೇಶ್ವರ ಮಹಾ ರಥೋತ್ಸವದಲ್ಲಿ RCB ಪರ ಜೈಕಾರ ಹಾಕಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು
ಮಾರ್ಚ್ 25ರಂದು ಬೆಂಗಳೂರಿನಲ್ಲಿ ಆರ್ಸಿಬಿ ಮೊದಲ ಪಂದ್ಯವಿತ್ತು. ಈ ವೇಳೆ ಕೊಪ್ಪಳದಲ್ಲಿ ನಡೆದ ಐತಿಹಾಸಿಕ ಶ್ರೀ ಮುರಡಬಸವೇಶ್ವರ ಮಹಾ ರಥೋತ್ಸವದಲ್ಲಿ ಅಭಿಮಾನಿಗಳು ಆರ್ಸಿಬಿ ಪರ ಜಯಘೋಷ ಕೂಗಿ ಸಂಭ್ರಮಿಸಿದರು. ದೇವರ ಜಾತ್ರೆಯಲ್ಲೂ ಆರ್ಸಿಬಿ ಅಭಿಮಾನಿಗಳ ಹವಾ ಜೋರಾಗಿತ್ತು.
ಕೊಪ್ಪಳ, ಮಾರ್ಚ್.26: ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂಧ್ಯದಲ್ಲಿ ಪಂಜಾಬ್ ವಿರುದ್ಧ ಆರ್ಸಿಬಿ (RCB) ರೋಚಕ ಗೆಲುವು ಕಂಡಿದೆ. 4 ವಿಕೆಟ್ಗಳಿಂದ ಗೆದ್ದು RCB ತವರಿನಲ್ಲೇ ಹೊಸ ಅಧ್ಯಾಯ ಆರಂಭಿಸಿದೆ. ಇದು ಅಭಿಮಾನಿಗಳ ಹರ್ಷೋದ್ಗಾರಕ್ಕೆ ಕಾರಣವಾಗಿದೆ. ಅದು ಯಾವ ಮಟ್ಟಿಗೆ ಅಂದ್ರೆ ಕೊಪ್ಪಳ (Koppal) ಜಿಲ್ಲೆಯ ಕಾರಟಗಿ ತಾಲೂಕಿನ ಯರಡೋಣ ಗ್ರಾಮದ ಆರಾಧ್ಯ ದೈವ ಐತಿಹಾಸಿಕ ಶ್ರೀ ಮುರಡಬಸವೇಶ್ವರ ಮಹಾ ರಥೋತ್ಸವದಲ್ಲಿ ಅಭಿಮಾನಿಗಳು ಆರ್ಸಿಬಿ ಪರ ಜಯಘೋಷ ಕೂಗಿದ್ದಾರೆ. ದೇವರ ಜಾತ್ರೆಯಲ್ಲೂ ಆರ್ಸಿಬಿ ಹವಾ ಜೋರಾಗಿದೆ.
ಜಾತ್ರಾ ಮಹೋತ್ಸವದಲ್ಲಿ ಆರ್ಸಿಬಿ ಅಭಿಮಾನಿಗಳು ಸಖತ್ ಡಾನ್ಸ್ ಆಡಿ ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಹೋಳಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ನಿನ್ನೆ ಅದ್ದೂರಿ ರಥೋತ್ಸವ ನಡೆಯಿತು. ಈ ವೇಳೆ ಅಭಿಮಾನಿಗಳು ಆರ್ಸಿಬಿ ಪರ ಜೈಕಾರ ಹಾಕಿ ಡಾನ್ಸ್ ಮಾಡಿ ಸಂಭ್ರಮಿಸಿದರು. ಆರ್ಸಿಬಿ, ಆರ್ಸಿಬಿ ಎಂದು ಕುಣಿದು ಕುಪ್ಪಳಿಸಿದರು. ಸದ್ಯ ನಿನ್ನೆಯ ಪಂದ್ಯ ಗೆದ್ದಿದ್ದು ಅಭಿಮಾನಿಗಳು ಮತ್ತಷ್ಟು ಸಂತೋಷದಲ್ಲಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ