ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ ಪ್ರಸಾದ
ಕೊಪ್ಪಳದ ಗವಿಮಠ ಜಾತ್ರೆಯ ಮಹಾದಾಸೋಹದ ಅಂತಿಮ ದಿನದಂದು ಭಕ್ತರಿಗಾಗಿ 85 ಕ್ವಿಂಟಾಲ್ ಗೋಧಿ ಹುಗ್ಗಿ ಪ್ರಸಾದ ಸಿದ್ಧಪಡಿಸಲಾಗಿತ್ತು. 18 ದಿನಗಳ ಕಾಲ ನಡೆದ ಈ ದಾಸೋಹದಲ್ಲಿ 20 ಲಕ್ಷಕ್ಕೂ ಹೆಚ್ಚು ಭಕ್ತರು ಪ್ರಸಾದ ಸೇವಿಸಿದ್ದು, ಕೊನೆಯ ದಿನ 50 ಕ್ವಿಂಟಾಲ್ ಬೆಲ್ಲ ಮತ್ತು 25 ಕ್ವಿಂಟಾಲ್ ಗೋಧಿ ಬಳಸಿ ಗೋಧಿ ಹುಗ್ಗಿ ತಯಾರಿಸಲಾಗಿದೆ.
ಕೊಪ್ಪಳ, ಜನವರಿ 18: ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಮಠದ ಮಹಾದಾಸೋಹಕ್ಕೆ ಇಂದು ಕೊನೆಯ ದಿನ. 18 ದಿನಗಳ ಕಾಲ ನಡೆದ ಮಹಾರಥೋತ್ಸವ ಹಿನ್ನೆಲೆ ದಾಸೋಹವನ್ನು ಏರ್ಪಡಿಸಲಾಗಿತ್ತು. ಜಾತ್ರೆಯ ಕೊನೆಯ ದಿನದಂದು ಭಕ್ತರಿಗೆ ವಿಶೇಷವಾಗಿ ಗೋಧಿ ಹುಗ್ಗಿಯನ್ನು ಪ್ರಸಾದವಾಗಿ ನೀಡಲಾಗಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಸುಮಾರು 85 ಕ್ವಿಂಟಾಲ್ ಗೋಧಿ ಹುಗ್ಗಿ ಸಿದ್ಧಪಡಿಸಲಾಗಿತ್ತು. 25 ಕ್ವಿಂಟಾಲ್ ಗೋಧಿ, 50 ಕ್ವಿಂಟಾಲ್ ಬೆಲ್ಲ, ಕಡ್ಲೆಬೇಳೆ ಮತ್ತು ಕೊಬ್ಬರಿಯನ್ನು ಬಳಸಿ ಈ ಬೃಹತ್ ಪ್ರಮಾಣದ ಗೋಧಿ ಹುಗ್ಗಿಯನ್ನು ಎಂಟು ಕೊಪ್ಪರಿಗೆಗಳಲ್ಲಿ ತಯಾರಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
