ಹೆಣ್ಮಕ್ಕಳಿಗೆ ಕೋರಮಂಗಲ ರಾತ್ರಿ ಸಂಚಾರಕ್ಕೆ ಡೇಂಜರ್: ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ
ಬೆಂಗಳೂರಿನ ಜನಪ್ರಿಯ ಕೋರಮಂಗಲದಲ್ಲಿ ರಾತ್ರಿ ವೇಳೆ ಮಹಿಳೆಯರ ಸುರಕ್ಷತೆ ಕುರಿತು ಆತಂಕ ಹೆಚ್ಚಿದೆ. ರಾತ್ರಿ 1 ಗಂಟೆಯ ನಂತರ ಮಹಿಳೆಯರಿಗೆ ಕಿರುಕುಳ ನೀಡುವ ಘಟನೆಗಳು ವರದಿಯಾಗುತ್ತಿದ್ದು, ಹಲವರು ಹೊರಬರಲು ಭಯಪಡುತ್ತಿದ್ದಾರೆ. ಬೆಂಗಳೂರು ಎಲ್ಲರಿಗೂ ಸುರಕ್ಷಿತವಾಗಿರಬೇಕು, ಅತಿಥಿ ಸತ್ಕಾರಕ್ಕೆ ಹೆಸರಾದ ನಗರವಾಗಿ ಉಳಿಯಲು ಸಭ್ಯ ನಡವಳಿಕೆ ಅಗತ್ಯ ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಇದು ನಮ್ಮೆಲ್ಲರ ಜವಾಬ್ದಾರಿ.
ಬೆಂಗಳೂರು, ಮೇ,14: ಸಿಲಿಕಾನ್ ಸಿಟಿಯ ಅತ್ಯಂತ ಜನಪ್ರಿಯ ಹ್ಯಾಂಗ್‌ಔಟ್ ತಾಣಗಳಲ್ಲಿ ಒಂದಾದ ಕೋರಮಂಗಲವು ಈಗ ರಾತ್ರಿ ವೇಳೆ ಮಹಿಳೆಯರ ಸುರಕ್ಷತೆಯ ವಿಚಾರವಾಗಿ ಸುದ್ದಿಯಲ್ಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯಲು ಬರುವವರ ಸಂಖ್ಯೆ ಹೆಚ್ಚಿದ್ದರೂ, ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಕೆಣಕುವುದು ಮತ್ತು ಅಸಭ್ಯವಾಗಿ ವರ್ತಿಸುವ ಘಟನೆಗಳು ವರದಿಯಾಗುತ್ತಿವೆ.ರಾತ್ರಿ 1 ಗಂಟೆಯ ನಂತರ ರಸ್ತೆಗಳಲ್ಲಿ ಮಹಿಳೆಯರನ್ನು ಉದ್ದೇಶಿಸಿ ಕೂಗುವುದು ಅಥವಾ ಕಿರುಕುಳ ನೀಡುವುದರಿಂದಾಗಿ ಅನೇಕರು ಹೊರಬರಲು ಭಯಪಡುತ್ತಿದ್ದಾರೆ. ಬೆಂಗಳೂರಿನಂತಹ ಸುರಕ್ಷಿತ ನಗರದಲ್ಲಿ ಇಂತಹ ಪ್ರವೃತ್ತಿ ಬೆಳೆಯುತ್ತಿರುವುದು ವಿಷಾದನೀಯ. “ನಗರವು ಎಲ್ಲರಿಗೂ ಸೇರಿದ್ದು, ಇಲ್ಲಿ ಪ್ರತಿಯೊಬ್ಬರಿಗೂ ಸುರಕ್ಷಿತವಾಗಿ ಸಂಚರಿಸುವ ಹಕ್ಕಿದೆ” ಎಂದು ಸ್ಥಳೀಯರು ಮತ್ತು ಪ್ರಜ್ಞಾವಂತ ನಾಗರಿಕರು ಒತ್ತಾಯಿಸುತ್ತಿದ್ದಾರೆ. ಬೆಂಗಳೂರನ್ನು ಅತಿಥಿ ಸತ್ಕಾರ ಮತ್ತು ಗೌರವಕ್ಕೆ ಹೆಸರಾದ ನಗರವನ್ನಾಗಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಮೋಜು-ಮಸ್ತಿ ಮಾಡುವ ಭರದಲ್ಲಿ ಮಹಿಳೆಯರಿಗೆ ಮುಜುಗರ ತರುವಂತಹ ಕೆಲಸ ಮಾಡಬೇಡಿ. ಇತರರನ್ನು ಗೌರವಿಸುವುದೇ ನಿಜವಾದ ಸುಸಂಸ್ಕೃತ ನಡವಳಿಕೆ ಎಂದು ವ್ಯಕ್ತಿಯೊಬ್ಬರು @Karnataka Portfolio ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: May 14, 2026 08:37 AM
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

