Karnataka Assembly Polls: ಮತದಾನಕ್ಕೆ ಕೇವಲ ಎರಡು ವಾರ ಬಾಕಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ನವಚಂಡಿಕಾಯಾಗದಲ್ಲಿ ಡಿಕೆ ಶಿವಕುಮಾರ್ ಭಾಗಿ
ಮತದಾನಕ್ಕೆ ಕೇವಲ ಎರಡು ವಾರ ಮಾತ್ರ ಬಾಕಿಯಿರುವುದರಿಂದ ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುವುದರ ಜೊತೆಗೆ ಗುಡಿ ಗುಂಡಾರಗಳ ಸುತ್ತು ಹಾಕುತ್ತಿದ್ದಾರೆ.
ಉಡುಪಿ: ಜಿಲ್ಲೆಯ ಬೈಂದೂರು ಬಳಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ (Kollur Mookambika temple) ಇಂದು ಜರುಗುತ್ತಿರುವ ನವಚಂಡಿಕಾಯಾಗ ಪೂರ್ಣಾಹುತಿ ಪೂಜಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ತಮ್ಮ ಪತ್ನಿಯೊಂದಿಗೆ ಭಾಗಿಯಾಗಿದ್ದರು. ಮೂಕಾಂಬಿಕೆಯ ಸನ್ನಿಧಿ ದೇವಾಲಯದ ಪ್ರಾಂಗಣದಲ್ಲಿ ಶಿವಕುಮಾರ್ ಕೈಯಲ್ಲಿ ರುದ್ರಾಕ್ಷಿ ಮಣಿಹಾರ ಹಿಡಿದು ಧ್ಯಾಮಮಗ್ನರಾಗಿರುವುದನ್ನು ನೋಡಬಹುದು. ರಾಜ್ಯ ವಿಧಾನಸಭಾ ಚುನಾವಣೆ (assembly elections) ಮತದಾನಕ್ಕೆ ಕೇವಲ ಎರಡು ವಾರ ಮಾತ್ರ ಬಾಕಿಯಿರುವುದರಿಂದ ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುವುದರ ಜೊತೆಗೆ ಗುಡಿ ಗುಂಡಾರಗಳ ಸುತ್ತು ಹಾಕುತ್ತಿದ್ದಾರೆ. ಬೇರೆ ಸಮಯಕ್ಕಿಂತ ಚುನಾವಣಾ ಸಂದರ್ಭಗಳಲ್ಲಿ ನಮ್ಮ ರಾಜಕಾರಣಿಗಳು ದೇವದೇವತೆಗಳೆಡೆ ಹೆಚ್ಚು ಶ್ರದ್ಧೆ ಭಕ್ತಿಯನ್ನು ಪ್ರದರ್ಶಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ