ಡಿಕೆ ಶಿವಕುಮಾರ್ ಆಪ್ತನ ಬ್ಯಾಗ್ನಲ್ಲಿ 50 ಸಾವಿರ ನಗದು ಪತ್ತೆ: ನೋಟಿಸ್ ನೀಡಿದ ಚುನಾವಣಾಧಿಕಾರಿಗಳು
ಜಿಲ್ಲೆಯ ಬೈಂದೂರಿನ ಹರೇ ಶಿರೂರು ಹೆಲಿಪ್ಯಾಡ್ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಆಪ್ತಯೊಬ್ಬರ ಬ್ಯಾಗ್ನಲ್ಲಿ 50 ಸಾವಿರ ನಗದು ಪತ್ತೆಯಾಗಿದ್ದು, ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಉಡುಪಿ: ಜಿಲ್ಲೆಯ ಬೈಂದೂರಿನ ಹರೇ ಶಿರೂರು ಹೆಲಿಪ್ಯಾಡ್ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅವರ ಆಪ್ತಯೊಬ್ಬರ ಬ್ಯಾಗ್ನಲ್ಲಿ 50 ಸಾವಿರ ನಗದು ಪತ್ತೆ (cash found) ಯಾಗಿದ್ದು, ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹೆಲಿಕಾಪ್ಟರ್ನಲ್ಲಿ ಬೈಂದೂರಿಗೆ ಆಗಮಿಸಿದ್ದ ಡಿ.ಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಬೈಂದೂರಿಗೆ ಆಗಮಿಸಿದ್ದ ಉದ್ಯಮಿ ಯು.ಬಿ. ಶೆಟ್ಟಿ ಕಾರು ತಪಾಸಣೆ ವೇಳೆ ಹಣ ಪತ್ತೆ ಆಗಿದೆ. ಬೈಂದೂರಿನ ಹರೇ ಶಿರೂರು ಹೆಲಿಪ್ಯಾಡ್ ಬಳಿ ಚುನಾವಣಾ ಅಧಿಕಾರಿಗಳು ಕಾರು ತಪಾಸಣೆ ಮಾಡಿದ್ದು, ಸೂಟ್ಕೇಸ್ನಲ್ಲಿ 50 ಸಾವಿರ ನಗದು ಪತ್ತೆ ಆಗಿದೆ. ಕಾರಿನಲ್ಲಿ ಪತ್ತೆಯಾದ ಹಣದ ದಾಖಲೆ ಕೇಳಿದ್ದು, ದಾಖಲೆ ನೀಡಿದಿದ್ದಾಗ ಹಣ ಜಪ್ತಿ ಮಾಡಿ ಯು.ಬಿ.ಶೆಟ್ಟಿಗೆ ಚುನಾವಣಾಧಿಕಾರಿಗಳಿಂದ ನೋಟಿಸ್ ನೀಡಲಾಗಿದೆ.
ಚುನಾವಣಾ ಆಯೋಗದ ಅಧಿಕಾರಿಗಳ ಕ್ರಮಕ್ಕೆ ಡಿ.ಕೆ ಶಿವಕುಮಾರ್ ತೀವ್ರ ಆಕ್ಷೇಪ
ಮತ್ತೊಂದೆಡೆ ಪದೇಪದೆ ತಾವು ಪ್ರಯಾಣಿಸುವ ಹೆಲಿಕಾಪ್ಟರ್‌ನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವುದಕ್ಕೆ ಡಿ.ಕೆ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿನ್ನೆ, ಇಂದು ಡಿಕೆಶಿ ಹೆಲಿಕಾಪ್ಟರ್‌ನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದು, ಚುನಾವಣಾ ಅಧಿಕಾರಿಗಳು ನನ್ನ ಹೆಲಿಕಾಪ್ಟರ್ ತಪಾಸಣೆಗೆ ಅಭ್ಯಂತರವಿಲ್ಲ. ಆದರೆ ಕಾಲ ಮಿತಿಯೊಳಗೆ ನನ್ನ ಹೆಲಿಕಾಪ್ಟರ್‌ನ್ನು ತಪಾಸಣೆ ನಡೆಸಲಿ. ಚುನಾವಣಾ ಪ್ರಚಾರಕ್ಕೆ ನನಗೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು. ಈ ಕುರಿತಾಗಿ ಫೇಸ್‌ಬುಕ್‌ನಲ್ಲಿ ಫೋಟೋಗಳ ಸಮೇತ ಡಿಕೆಶಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ: Karnataka Assembly Elections 2023: ಬೆಂಗಳೂರಿನಲ್ಲಿ ಈವರೆಗೂ ಸೀಜ್ ಆದ ವಸ್ತುಗಳ ಮೌಲ್ಯ ಇಷ್ಟೊಂದಾ? ಅಬ್ಬಬ್ಬಾ..!
76,30,86,056 ಪ್ರಮಾಣ ಮೌಲ್ಯದ ವಸ್ತುಗಳನ್ನು ಜಪ್ತಿ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಮತ್ತೊಂದೆಡೆ ನೀತಿ ಸಂಹಿತೆ ಜಾರಿ(Code Of Conduct) ಆಗಿದ್ದು ಪೊಲೀಸರು, ಚುನಾವಣಾಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಅಕ್ರಮವಾಗಿ ಸಾಗಿಸಲಾಗುತ್ತಿರುವ, ನಗದು, ಮದ್ಯ, ಮಾದಕ ದ್ರವ್ಯಗಳು, ಆಭರಣ, ಉಡುಗೊರೆ ಸಾಮಗ್ರಿಗಳು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ಹದ್ದಿನಕಣ್ಣಿಟ್ಟಿರುವ ಅಧಿಕಾರಿಗಳು ಏಪ್ರಿಲ್ 20ರ ವರೆಗೆ 2894 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. 76,30,86,056 ಪ್ರಮಾಣ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ವಿರುದ್ಧ ದೂರು
ಇದುವರೆಗೆ ನಗರದಲ್ಲಿ ಚುನಾವಣೆಯ ಸಲುವಾಗಿ ಒಟ್ಟು 2894 ಎಫ್ಆರ್ ದಾಖಲಾಗಿದ್ದು 76,30,86,056 ಪ್ರಮಾಣದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ವರೆಗೂ ಒಟ್ಟು ಬೆಂಗಳೂರು ನಗರದಲ್ಲಿ 743 ದೂರುಗಳು ಚುನಾವಣೆಯ ಸಂಬಂಧ ದಾಖಲಾಗಿದೆ. ಅದರಲ್ಲಿ 119 ಸುಳ್ಳು ದೂರುಗಳು, 622 ಪ್ರಕರಣದಲ್ಲಿ ಕ್ರಮಕೈಗೊಳ್ಳಲಾಗಿದೆ. ಉಳಿದ 2 ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:10 pm, Sun, 23 April 23