ಈಡುಗಾಯಿ ಹೊಡೆಯೋದು ಹೇಗೆ ಅಂತ ರಾಹುಲ್ ಗಾಂಧಿಗೆ ಶಿವಕುಮಾರ ಮೈಸೂರಲ್ಲಿ ಹೇಳಿಕೊಟ್ಟರು

ಈಡುಗಾಯಿ ಹೊಡೆಯೋದು ಹೇಗೆ ಅಂತ ರಾಹುಲ್ ಗಾಂಧಿಗೆ ಶಿವಕುಮಾರ ಮೈಸೂರಲ್ಲಿ ಹೇಳಿಕೊಟ್ಟರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 03, 2022 | 3:26 PM

ಈಡುಗಾಯಿ ಹೊಡೆಯಲು ನೀಡಿದಾಗ ಅದನ್ನು ಹೇಗೆ ಹೊಡೆಯೋದು ಅಂತ ಗೊತ್ತಿರದ ರಾಹುಲ್ ತಮ್ಮದೇ ಶೈಲಿಯಲ್ಲಿ ಹೊಡೆಯಲು ಮುಂದಾದಾಗ ಡಿಕೆ ಶಿವಕುಮಾರ ಅವರನ್ನು ತಡೆದು ಹೊಡೆಯುವ ರೀತಿ ಹೇಳಿಕೊಟ್ಟರು.

ಮೈಸೂರು: ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಕರ್ನಾಟಕದಲ್ಲಿ ಪಾದಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಯವರು (Rahul Gandhi) ಸೋಮವಾರ ಮೈಸೂರಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ಚಾಮುಂಡೇಶ್ವರಿಯ (Goddess Chamundeshwari) ದರ್ಶನ ಪಡೆದರು. ಈ ಸಂದರ್ಭದಲ್ಲಿ ಈಡುಗಾಯಿ ಹೊಡೆಯಲು ನೀಡಿದಾಗ ಅದನ್ನು ಹೇಗೆ ಹೊಡೆಯೋದು ಅಂತ ಗೊತ್ತಿರದ ಅವರು ತಮ್ಮದೇ ಶೈಲಿಯಲ್ಲಿ ಹೊಡೆಯಲು ಮುಂದಾದಾಗ ಡಿಕೆ ಶಿವಕುಮಾರ (DK Shivakumar) ಅವರನ್ನು ತಡೆದು ಹೊಡೆಯುವ ರೀತಿ ಹೇಳಿಕೊಟ್ಟರು.