ಹೇ.. ಇದು ಬೆಂಗಳೂರು ಅಲ್ಲ ಮೊಹಮ್ಮದ್ ನಲಪಾಡ್ಗೆ ಮಂಡ್ಯ ಕೈ ಕಾರ್ಯಕರ್ತರ ಆವಾಜ್
ಮಂಡ್ಯದಲ್ಲಿ ‘ಕೈ’ ಕಾರ್ಯಕರ್ತರು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ಗೆ ತರಾಟೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೋ ಯಾತ್ರೆ ನಡೆಯುತ್ತಿದ್ದು, ಯಾತ್ರೆ ಇಂದು ಮಂಡ್ಯ ಜಿಲ್ಲೆಗೆ ಕಾಲಿಟ್ಟಿದೆ. ಮಂಡ್ಯದಲ್ಲಿ ‘ಕೈ’ ಕಾರ್ಯಕರ್ತರು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ಗೆ ತರಾಟೆ ತೆಗೆದುಕೊಂಡಿದ್ದಾರೆ. ಯಾತ್ರೆಯಲ್ಲಿ ಜನರನ್ನು ನಿಯಂತ್ರಣ ಮಾಡುವ ವೇಳೆ ಪೊಲೀಸರು-ಜನರ ವಾಗ್ವಾದ ನಡೆದಿದೆ. ಈ ವೇಳೆ ನಲಪಾಡ್ ಓಡಿ ಬಂದು ಕೈಮುಗಿದು ಜನರನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಆಗ ಮಂಡ್ಯ ‘ಕೈ’ ಕಾರ್ಯಕರ್ತರು ಹೇ.. ಇದು ಬೆಂಗಳೂರು ಅಲ್ಲ ಎಂದು ನಲಪಾಡ್ಗೆ ಆವಾಜ್ ಹಾಕಿದ್ದಾರೆ. ಬಳಿಕ ಮೊಹಮ್ಮದ್ ನಲಪಾಡ್ ಕೈ ಮುಗಿದು ವಾಪಸ್ ಹೋಗಿದ್ದಾರೆ.
Latest Videos