ದೆಹಲಿಯಲ್ಲಿ ಸಿದ್ದರಾಮಯ್ಯನವರಂತೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ ಸಹ ಆತಂಕದಿಂದ ಎಐಸಿಸಿ ಕಚೇರಿ ಕಡೆ ಧಾವಿಸಿದರು!
ಡಿಕೆ ಶಿವಕುಮಾರ್ ಅವರು ಕೂಡ ಅವಸರದಲ್ಲಿ ಎಐಸಿಸಿ ಕಚೇರಿ ಕಡೆ ಹೋಗುತ್ತಿರುವುದನ್ನು ನೋಡಿದರೆ ದೊಡ್ಡ ಸಂಗತಿಯೊಂದು ನಡೆಯಲಿದೆಯೇನೋ ಎಂಬ ಅನುಮಾನ ಮೂಡುತ್ತದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ (KPCC) ನಾಯಕರೆಲ್ಲ ಆತಂಕದಲ್ಲಿರುವಂತಿದೆ. ಜಾರಿ ನಿರ್ದೇಶನಾಲಯವು ರಾಹುಲ್ ಗಾಂಧಿಯವರನ್ನು (Rahul Gandhi) ಪುನಃ ವಿಚಾರಣೆಗೆ ಕರೆದಿದೆ ಮತ್ತು ದೆಹಲಿಯಿಂದ ಲಭ್ಯವಾಗುತ್ತಿರುವ ಮೂಲಗಳ ಪ್ರಕಾರ ಅವರನ್ನು ಬಂಧಿಸುವ ಸಾಧ್ಯತೆಯಿದೆ. ಸಿದ್ದರಾಮಯ್ಯ ಸೇರಿದಂತೆ ಹಲವಾರು ಕೆಪಿಸಿಸಿ ನಾಯಕರು ಎಐಸಿಸಿ ಕಚೇರಿಯಲ್ಲಿ ಜಮಾಯಿಸಿದ್ದಾರೆ. ಡಿಕೆ ಶಿವಕುಮಾರ್ (DK Shivakumar) ಅವರು ಕೂಡ ಅವಸರದಲ್ಲಿ ಎಐಸಿಸಿ ಕಚೇರಿ ಕಡೆ ಹೋಗುತ್ತಿರುವುದನ್ನು ನೋಡಿದರೆ ದೊಡ್ಡ ಸಂಗತಿಯೊಂದು ನಡೆಯಲಿದೆಯೇನೋ ಎಂಬ ಅನುಮಾನ ಮೂಡುತ್ತದೆ. ಶಿವಕುಮಾರ ಮುಖದಲ್ಲಿ ಆತಂಕ ಸ್ಪಷ್ಟವಾಗಿ ಕಾಣುತ್ತಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.