ಸಂಬರಗಿಗೆ ತಾಕತ್ತಿದ್ದರೆ ನಾನು ಹೇಳುವ ಜಾಗದಲ್ಲಿ ಹಲಾಲ್ ಕಟ್ ವಿರುದ್ಧ ಅಭಿಯಾನ ನಡೆಸಲಿ: ಲಕ್ಷ್ಮಣ್, ಕೆಪಿಸಿಸಿ ವಕ್ತಾರ
ಸಂಬರಗಿ ಮತ್ತು ಮುತಾಲಿಕ್ ಅವರಂಥ ಜನ ಯಾವುದೋ ಸುರಕ್ಷಿತವಾದ ಸ್ಥಳದಲ್ಲಿ ನಿಂತುಕೊಂಡು ಹಲಾಲ್ ಕಟ್ ಮಾಂಸ ತಿನ್ನಬೇಡಿ ಅಂತ ಹೇಳುತ್ತಾರೆ ಎಂದ ಲಕ್ಷ್ಮಣ್ ಅವರು ಸಂಬರಗಿಗೆ ತಾವು ತಿಳಿಸುವ ಜಾಗದಲ್ಲಿ ಬಂದು ಅಭಿಯಾನ ಮಾಡುವಂತೆ ಸವಾಲು ಹಾಕಿದರು.
ಮೈಸೂರು: ಯುಗಾದಿ ಹಬ್ಬ (Ugadi festival) ಮುಗಿಯಿತು, ಹೊಸತೊಡುಕು ಸಹ ಆಗಿ ಹೋಯಿತು, ಆದರೆ ಹಲಾಲ್ ಕಟ್ (Halal Cut) ಮಾಂಸ ಜಟ್ಕಾ ಕಟ್ (Jhatka Cut) ಮಾಂಸದ ಬಗ್ಗೆ ವಿವಾದ ಕೊನೆಗಾಣುವ ಲಕ್ಷಣಗಳು ಕಾಣಿಸುತ್ತಿಲ್ಲ ಮಾರಾಯ್ರೇ. ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ರವಿವಾರದಂದು ನೀಡಿದ ಹೇಳಿಕೆಗಳು ಹಲಾಲ್ ಕಟ್ ಪರ ಇರುವ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಕ್ರಿಯಿಸುವ ಸಂದರ್ಭವನ್ನು ಸೃಷ್ಟಿಸಿವೆ. ಸೋಮವಾರ ಮೈಸೂರಲ್ಲಿ ಸುದ್ದಿಗೋಷ್ಟಿ ಒಂದನ್ನು ಉದ್ದೇಶಿಸಿ ಮಾತಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವಕ್ತಾರ ಎಮ್ ಲಕ್ಷಣ್ ಅವರು ಹಲಾಲ್ ಕಟ್ ಮಾಂಸದ ವಿರುದ್ಧ ಅಭಿಯಾನ ನಡೆಸುತ್ತಿರುವ ಸಂಬರಗಿ ಮತ್ತ್ತು ಮುತಾಲಿಕ್ ಸೇರಿದಂತೆ ಹಿಂದೂ ಸಂಘಟನೆಗಳ ವಿರುದ್ಧ ಕಿಡಿಕಾರಿದರು.
ಸಂಬರಗಿ ಮತ್ತು ಮುತಾಲಿಕ್ ಅವರಂಥ ಜನ ಯಾವುದೋ ಸುರಕ್ಷಿತವಾದ ಸ್ಥಳದಲ್ಲಿ ನಿಂತುಕೊಂಡು ಹಲಾಲ್ ಕಟ್ ಮಾಂಸ ತಿನ್ನಬೇಡಿ ಅಂತ ಹೇಳುತ್ತಾರೆ ಎಂದ ಲಕ್ಷ್ಮಣ್ ಅವರು ಸಂಬರಗಿಗೆ ತಾವು ತಿಳಿಸುವ ಜಾಗದಲ್ಲಿ ಬಂದು ಅಭಿಯಾನ ಮಾಡುವಂತೆ ಸವಾಲು ಹಾಕಿದರು. ಮೈಸೂರಿನ ಶಾಂತಿನಗರ, ಉದಯಗಿರಿ ಮತ್ತು ಎನ್ ಆರ್ ಮೊಹಲ್ಲಾಗೆ ಬರುವಂತೆ ಕೆ ಪಿ ಸಿ ಸಿ ವಕ್ತಾರ ಆಹ್ವಾನಿಸಿದರು.
ರವಿವಾರದಂದು ಸಂಬರಗಿ ಅವರು ಹಲಾಲ್ ಮಾಂಸವನ್ನು ನಿಷೇಧಿಸಿ, ಹಲಾಲ್ ಉತ್ಪನ್ನಗಳು ನಿಷೇಧಿಸಿ, ಯುಗಾದಿಯ ಹೊಸತೊಡಕುದಲ್ಲಿ ಹಲಾಲ್ ಮಾಂಸವನ್ನು ನಿಷೇಧಿಸಿ, ಜಾಗೃತರಾಗಿರಿ ನನ್ನ ಹಿಂದೂ ಸಹೋದರ ಸಹೋದರಿಯರೇ, ಅಂತ ಟ್ವೀಟ್ ಮಾಡಿದ್ದರು.
ಹಲಾಲ್ ಮಾಂಸವನ್ನು ನಿಷೇಧಿಸಿ.ಹಲಾಲ್ ಉತ್ಪನ್ನಗಳು ನಿಷೇಧಿಸಿ.ಹಲಾಲ್ ನಿಷೇಧಿಸಿ.
ಯುಗಾದಿಯ ಹೊಸತೊಡಕುದಲ್ಲಿ ಹಲಾಲ್ ಮಾಂಸವನ್ನು ನಿಷೇಧಿಸಿ.ಜಾಗ್ರತರಾಗಿರಿ ನನ್ನ ಹಿಂದೂ ಸಹೋದರ ಸಹೋದರಿಯರೇ#Hindu #Hindus #Hinduism #HinduRashtra #Halal #HalalMeat #halaleconomics #BanHalal #SayNotoHalal #bycotthalal @CTRavi_BJP pic.twitter.com/CeUnMs96R2
— Veera Prashanth Sambargi (@vip_sambaragi) April 3, 2022
ರಾಜ್ಯದಲ್ಲಿ ಹಲಾಲ್ ಕಟ್ ಮಾಂಸ ಜಟ್ಕಾ ಕಟ್ ಮಾಂಸ ಅಂತೇನೂ ಇಲ್ಲ. ಹಿಂದೂಗಳು ಹಲಾಲ್ ಕಟ್ ಮಾಂಸವನ್ನೂ ತಿನ್ನುತ್ತಾರೆ ಜಟ್ಕಾ ಕಟ್ ಮಾಂಸವನ್ನೂ ತಿನ್ನುತ್ತಾರೆ. ಮಾಂಸದ ಬಗ್ಗೆ ಸುಖಾಸುಮ್ಮನೆ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಲಕ್ಷ್ಮಣ್ ಹೇಳಿದರು.
ಇದನ್ನೂ ಓದಿ: ಈಗಾಗಲೇ FSSAI ಇರುವಾಗ ಹಲಾಲ್ನ ಪ್ರತ್ಯೇಕ ಅಗತ್ಯವಿಲ್ಲ; 2020ರಲ್ಲೇ ಕೇಂದ್ರಕ್ಕೆ ಪತ್ರ ಬರೆದಿದ್ದ ಹಿಂದೂ ಮುಖಂಡ