Loading video

Karnataka Budget Session; ಕನ್ನಡಕ್ಕೆ ದ್ರೋಹ ಬಗೆದಿರುವ ಅಧಿಕಾರಿಯ ವಿರುದ್ಧ ನಾಲಗೆ ಕಟ್ ಮಾಡುವ ರೀತಿಯಲ್ಲಿ ಕ್ರಮ ಜರುಗಿಸಬೇಕು: ಅಶೋಕ

|

Updated on: Mar 04, 2025 | 7:39 PM

ತಮ್ಮ ಕ್ಷೇತ್ರಗಳ ಅಭಿವೃದ್ಧಿ ಅನುದಾನ ಕೇಳಿದರೆ ಸಿಗುತ್ತಿಲ್ಲ, ಅದರೆ ಕನ್ನಡದ ದ್ರೋಹಿಯೊಬ್ಬ ಕೆಎಎಸ್ ಪರೀಕ್ಷೆಗಾಗಿ ರೂ 30 ಕೋಟಿ ಸರ್ಕಾರದಿಂದ ಖರ್ಚು ಮಾಡಿಸುತ್ತಾನೆ, ಈಗ ಮರು ಪರೀಕ್ಷೆಗೆ ಪುನಃ ರೂ. 15 ಕೋಟಿಯನ್ನು ಸರ್ಕಾರ ಖರ್ಚು ಮಾಡಬೇಕಿದೆ, ಎಲ್ಲಿಂದ ಹೊಂದಿಸಲಿದೆ ಸರಕಾರ ಹಣ ಎಂದು ಖಾರವಾಗಿ ಹೇಳುವ ಅಶೋಕ ದುರಂಹಕಾರಿ ಆಧಿಕಾರಿ ವಿರುದ್ಧ ನಾಲಗೆ ಕಟ್ ಮಾಡುವ ರೀತಿಯಲ್ಲಿ ಕ್ರಮ ಜರುಗಿಸಬೇಕು ಎನ್ನುತ್ತಾರೆ.

ಬೆಂಗಳೂರು, ಮಾರ್ಚ್ 4: ವಿಧಾನಭೆಯಲ್ಲಿ ಇಂದು ಮಧ್ಯಾಹ್ನದ ನಂತರ ಕರ್ನಾಟಕ ಲೋಕ ಸೇವಾ ಆಯೋಗದ (Karnataka Public Service Commission) ಅಧಿಕಾರಿಯೊಬ್ಬ ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಎಸಗಿರುವ ಪ್ರಮಾದಗಳ ಬಗ್ಗೆ ಕಾವೇರಿದ ಚರ್ಚೆ ನಡೆಯಿತು. ವಿರೋಧ ಪಕ್ಷದ ನಾಯಕ ಆರ್ ಅಶೋಕ ಗೂಗಲ್ ಮೂಲಕ ಕನ್ನಡಕ್ಕೆ ಭಾಷಾಂತರಿಕರಿಸಿರುವ ಅಧಿಕಾರಿಯನ್ನು ಕೂಡಲೇ ಸಸ್ಪೆಂಡ್ ಮಾಡಿ ಪರೀಕ್ಷೆ ನಡೆಸಲು ಖರ್ಚಾಗಿರುವ ರೂ. 30 ಕೋಟಿ ಹಣವನ್ನು ಅವನಿಂದಲೇ ವಸೂಲು ಮಾಡಬೇಕು ಎಂದು ಹೇಳಿದರು. ಕನ್ನಡದ ಹಲವಾರು ಸಾಹಿತಿಗಳು ಮುಖ್ಯಮಂತ್ರಿಯವರಿಗೆ ಈಗಾಗಲೇ ಪತ್ರ ಬರೆದಿದ್ದಾರೆ, ಕನ್ನಡದ ಕಗ್ಗೊಲೆ ಮಾಡಿರುವ ಅಧಿಕಾರಿಯನ್ನು ಇನ್ನೂ ಸೇವೆಯಲ್ಲಿ ಯಾಕೆ ಮುಂದುವರಿಸಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಸರ್ಕಾರಕ್ಕೆ ಕಿಂಚಿತ್ತಾದರೂ ಕನ್ನಡದ ಮೇಲೆ ಅಭಿಮಾನವಿದ್ದರೆ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್