ಕೆಪಿಎಸ್‌ಸಿ ನೇಮಕಾತಿ ಹಗರಣ: ಶಿವಶಂಕರಪ್ಪಗೆ ಸಿಐಡಿಯಿಂದ ಎರಡನೇ ಬಾರಿ ನೋಟಿಸ್
ಕೆಪಿಎಸ್‌ಸಿ ನೇಮಕಾತಿ ಹಗರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ ಸಾಹುಕಾರ್ ಶಿವಶಂಕರಪ್ಪ ಅವರಿಗೆ ಎರಡನೇ ಬಾರಿ ನೋಟಿಸ್ ಜಾರಿ ಮಾಡಿದೆ. ಪಶು ವೈದ್ಯಕೀಯ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಇಂದು ಅಥವಾ ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅವರು ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಆದೇಶ ಇನ್ನೂ ಬಾಕಿ ಇದೆ.
ಬೆಂಗಳೂರು, ಸೆಪ್ಟೆಂಬರ್ 03: ಕೆಪಿಎಸ್ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕದಲ್ಲಿ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ, ಸಾಹುಕಾರ್ ಶಿವಶಂಕರಪ್ಪಗೆ ಮತ್ತೆ ನೋಟಿಸ್ ನೀಡಿದೆ. ಇಂದು ಅಥವಾ ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದು, ಸಿಐಡಿ ಟೀಂ ಈಗಾಗಲೇ ಒಮ್ಮೆ ಶಿವಶಂಕರಪ್ಪ ವಿಚಾರಣೆ ನಡೆಸಿತ್ತು. ಕೆಲ ದಿನಗಳ ತನಿಖೆ ನಂತರ ಮತ್ತೆ ನೋಟಿಸ್ ನೀಡಲಾಗಿದ್ದು, ಮತ್ತೊಂದೆಡೆ ಹೈಕೋರ್ಟ್‌ನಲ್ಲಿ ಬಂಧನ ರಕ್ಷಣೆ ಕೋರಿ ಶಿವಶಂಕರಪ್ಪ ಸಲ್ಲಿಸಿದ್ದ ಅರ್ಜಿ ಸಂಬಂಧ ಆದೇಶ ಬರುವುದು ಇನ್ನೂ ಬಾಕಿ ಇದೆ. ಈ ನಡುವೆಯೇ ಸಿಐಡಿ ಶಿವಶಂಕರಪ್ಪಗೆ ಮತ್ತೊಂದು ಶಾಕ್ ಕೊಟ್ಟಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
