ಕೆಪಿಎಸ್​​​ಸಿ ಹಗರಣ: ಬಡ ಸ್ನೇಹಿತನಿಗೆ ಸೀಟ್‌ ಕೊಡಿಸಲು 30 ಲಕ್ಷ ರೂ. ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು

Updated on: Sep 27, 2026 | 3:24 PM

ಕೆಪಿಎಸ್‌ಸಿ (KPSC Scam) ಪಶುವೈದ್ಯಾಧಿಕಾರಿಗಳ ಅಕ್ರಮ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಮತ್ತಷ್ಟು ಸ್ಪೋಷ್ಟಕ ವಿಷಯಗಳು ಬಯಲಿಗೆಳೆದಿದೆ. ಈ ನಡುವೆ ಬಸವರಾಜ್ ಕನ್ನಾಳೆ ಶಿಷ್ಯ ಪವನ್, ತನ್ನ ಸ್ನೇಹಿತನಿಗೆ ಸೀಟ್‌ ಕೊಡಿಸಲು ಮತ್ತೊಬ್ಬ ಅಭ್ಯರ್ಥಿ ಜೊತೆ 30 ಲಕ್ಷ ರೂ. ಡೀಲ್ ಮಾಡಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ.

ಬೆಂಗಳೂರು, (ಸೆಪ್ಟೆಂಬರ್ 27): ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ಅಕ್ರಮ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಮತ್ತಷ್ಟು ಸ್ಪೋಷ್ಟಕ ವಿಷಯಗಳು ಬಯಲಿಗೆಳೆದಿದೆ. ಈ ನಡುವೆ ಬಸವರಾಜ್ ಕನ್ನಾಳೆ ಶಿಷ್ಯ ಪವನ್, ತನ್ನ ಸ್ನೇಹಿತನಿಗೆ ಸೀಟ್‌ ಕೊಡಿಸಲು ಮತ್ತೊಬ್ಬ ಅಭ್ಯರ್ಥಿ ಜೊತೆ 30 ಲಕ್ಷ ರೂ. ಡೀಲ್ ಮಾಡಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ. ಹೌದು…ಬೀದರ್ ಜಿಲ್ಲೆಯ ಅಭ್ಯರ್ಥಿಯೊಬ್ಬನ ಕುಟುಂಬ ಕಡುಬಡವರಿದ್ದ ಕಾರಣ ಅವನಿಗೆ ಪಶು ವೈದ್ಯಾಧಿಕಾರಿ ಸೀಟ್‌ಗಾಗಿ ಅಷ್ಟೊಂದು ಹಣ ಹೊಂದಿಸಲು ಅಸಾಧ್ಯವಾಗಿತ್ತು. ಕನ್ನಾಳೆ ಶಿಷ್ಯನಾಗಿದ್ದ ಪವನ್‌ ಹಾಗೂ ಆ ಅಭ್ಯರ್ಥಿಯ ನಡುವೆ ಒಳ್ಳೆಯ ಒಡನಾಟವಿತ್ತು. ಆದ್ದರಿಂದ ತನ್ನ ಗೆಳೆಯನಿಗೆ ಫ್ರೀ ಸೀಟ್‌ ಕೊಡಿಸಿ ಅಂತಾ ಪವನ್‌ ಕನ್ನಾಳೆ ಬಳಿ ಮನವಿ ಮಾಡಿಕೊಂಡಿದ್ದ. ಕನ್ನಾಳೆ ಆತನ ಮನವಿ ನಿರಾಕರಿಸಿದ್ದಕ್ಕೆ ಪವನ್‌ ಮಾಸ್ಟರ್‌ ಪ್ಲ್ಯಾನ್‌ವೊಂದನ್ನ ಮಾಡಿದ್ದ.

ಪವನ್ ತನ್ನ ಗೆಳಯನಿಗೆ ವೈದ್ಯ ಹುದ್ದೆ ಕೊಡಿಸುವಂತೆ ಕನ್ನಾಳೆ ಬಳಿ ಕೇಳಿದ್ದ. ಆದರೆ ಕನ್ನಾಳೆ, ಯಾರೊಬ್ಬರಿಗೂ ಪುಕ್ಕಟ್ಟೆಯಾಗಿ ಸರ್ಕಾರಿ ಕೆಲಸ ಕೊಡಿಸಲು ಆಗೋದಿಲ್ಲ, ನನ್ನ ಬಳಿ ದಾನ-ಧರ್ಮದ ವಿಚಾರ ಮಾತಾಡ್ಬೇಡ ಎಂದು ಹೇಳಿದ್ದ. ಇದರಿಂದ ಪವನ್‌ ತನ್ನ ಸ್ನೇಹಿತನಿಗೋಸ್ಕರ ಬೀದರ್ ಜಿಲ್ಲೆಯ ಮತ್ತೊಬ್ಬ ಅಭ್ಯರ್ಥಿ ಜೊತೆ ಸೀಟ್‌ಗಾಗಿ 30 ಲಕ್ಷ ಹಣ ಡೀಲ್ ಕುದುರಿಸಿದ್ದ. ತನಿಖೆ ವೇಳೆ ಆ 30 ಲಕ್ಷದಲ್ಲಿ 17 ಲಕ್ಷವನ್ನ ಸ್ನೇಹಿತ ಅಭ್ಯರ್ಥಿಯ ಹೆಸರಲ್ಲಿ ಕನ್ನಾಳೆಗೆ ನೀಡಿರೋದು ಬೆಳಕಿಗೆ ಬಂದಿದೆ. ಇದೀಗ ಕನ್ನಾಳೆ ಶಿಷ್ಯನಾಗಿದ್ದ ಪವನ್‌ ಗೆ ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 27, 2026 03:23 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More