ಕೆಆರ್ಎಸ್ ಡ್ಯಾಂನಲ್ಲಿ ಅನುಮತಿಯಿಲ್ಲದೆ ಖಾಸಗಿ ಕಂಪನಿಯಿಂದ ಮಣ್ಣು ಪರೀಕ್ಷೆ: ರೈತರ ತೀವ್ರ ವಿರೋಧ
ಕೆಆರ್ಎಸ್ ಡ್ಯಾಂನಲ್ಲಿ ಖಾಸಗಿ ಕಂಪನಿಯೊಂದು ಕಾವೇರಿ ನೀರಾವರಿ ನಿಗಮದ ಅನುಮತಿ ಪಡೆಯದೆ ಯಂತ್ರ ಬಳಸಿ ಮಣ್ಣು ಪರೀಕ್ಷೆ ನಡೆಸಿದೆ. ಬೆಂಗಳೂರು ಜಲ ಮಂಡಳಿಯ ಟೆಂಡರ್ ಪಡೆದ ಈ ಕಂಪನಿ ಆರನೇ ಹಂತದ ಯೋಜನೆ ಕಾಮಗಾರಿಗಾಗಿ ಪರೀಕ್ಷೆ ನಡೆಸುತ್ತಿದೆ. ಕೆಆರ್ಎಸ್ನಿಂದ ನೀರು ಪೂರೈಕೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮಂಡ್ಯ, ಜುಲೈ 14: ಕೆಆರ್ಎಸ್ ಜಲಾಶಯದ ಆವರಣದಲ್ಲಿ ಖಾಸಗಿ ಕಂಪನಿಯೊಂದು ಅನುಮತಿ ಪಡೆಯದೆ ಮಣ್ಣು ಪರೀಕ್ಷೆ ನಡೆಸುತ್ತಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಾವೇರಿ ನೀರಾವರಿ ನಿಗಮದ ಅನುಮತಿ ಇಲ್ಲದೆ, ಡ್ಯಾಂ ಒಳಗೆ ಯಂತ್ರಗಳ ಮೂಲಕ ಮಣ್ಣು ಪರೀಕ್ಷೆ ನಡೆಸಲಾಗುತ್ತಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಯಿಂದ ಆರನೇ ಹಂತದ ಯೋಜನೆ ಕಾಮಗಾರಿಗೆ ಟೆಂಡರ್ ಪಡೆದಿರುವ ಕಂಪನಿ ಈ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಯೋಜನೆಯ ಭಾಗವಾಗಿ ಕೆಆರ್ಎಸ್ ಡ್ಯಾಂನಿಂದ ನೀರು ಪೂರೈಕೆ ಮಾಡುವ ಪ್ರಸ್ತಾವನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಅಧಿಕೃತ ಅನುಮತಿಯಿಲ್ಲದೆ ಮಣ್ಣು ಪರೀಕ್ಷೆ ನಡೆಸುತ್ತಿರುವ ಬಗ್ಗೆ ಸ್ಥಳೀಯ ರೈತರು ಮತ್ತು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕಾಮಗಾರಿಗೆ ಸಿದ್ಧತೆ ನಡೆಸಿರುವ ಕ್ರಮವನ್ನು ಪ್ರಶ್ನಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
