ಕಾವೇರಿಯಲ್ಲಿ ತೀರ್ಥೋದ್ಭವ ಆಗುತ್ತಿದ್ದಂತೆ ಮತ್ತೊಮ್ಮೆ ಗರಿಷ್ಠ ಮಟ್ಟ ತಲುಪಿದ ಕೆಆರ್ಎಸ್
ಪ್ರಸಕ್ತ ಮಾನ್ಸೂನ್ ಸೀಸನ್ನಲ್ಲಿ ಉತ್ತಮ ಮಳೆಯ ಕಾರಣ ಸಂತುಷ್ಟಿಯಿಂದ ಬೀಗುತ್ತಿರುವ ರೈತ ಕೆಅರ್ಎಸ್ ಜಲಾಶಯ ಈ ವರ್ಷ ಮೂರನೇ ಸಲ ಭರ್ತಿಯಾಗಿರುವುದನ್ನು ಕಂಡು ಮತ್ತಷ್ಟು ಸಂತಸಭರಿತನಾಗಿದ್ದಾನೆ ಮತ್ತು ವರುಣ ದೇವನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾನೆ.
ಮಂಡ್ಯ: ಇಂದು ಬೆಳಗ್ಗೆ 7.40 ಕ್ಕೆ ಕೊಡಗು ಜಿಲ್ಲೆ ಭಾಗಮಂಡಲದ ಹತ್ತಿರವಿರುವ ತಲಕಾವೇರಿಯಲ್ಲಿ ಅರ್ಚಕರ ಸಮ್ಮುಖ ಮತ್ತು ಸಾವಿರಾರು ಭಕ್ತರ ಜಯಘೋಷಗಳ ರೋಮಾಂಚನದೊಂದಿಗೆ ತೀರ್ಥೋದ್ಭವ ಸಂಭವಿಸಿದೆ. ಅದು ಸರಿ, ಇಲ್ನೋಡಿ ಮಂಡ್ಯ ಜಿಲ್ಲೆ ಮತ್ತು ಸುತ್ತಮುತ್ತ ಭಾಗಗಳ ಜೀವನಾಡಿ ಕೆಅರ್ಎಸ್ ಡ್ಯಾಂ ಸಹ ತುಂಬಿ ತುಳುಕುತ್ತಿದೆ. ನಿಮಗೆ ಗೊತ್ತಿರುವ ಹಾಗೆ ಜಲಾಶಯ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು ನೀರು ಈ ಮಟ್ಟವನ್ನು ತಲುಪಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ