Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಜ್ಞರ ಪ್ರಕಾರ 152 ವರ್ಟಿಕಲ್ ಗೇಟ್​ಗಳ ಕೆಆರ್​​ಎಸ್ ಜಲಾಶಯಕ್ಕೆ ಯಾವುದೇ ಸಮಸ್ಯೆ ಇಲ್ಲ

ತಜ್ಞರ ಪ್ರಕಾರ 152 ವರ್ಟಿಕಲ್ ಗೇಟ್​ಗಳ ಕೆಆರ್​​ಎಸ್ ಜಲಾಶಯಕ್ಕೆ ಯಾವುದೇ ಸಮಸ್ಯೆ ಇಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on:Aug 13, 2024 | 11:20 AM

ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ಮೈಸೂರಿನ ಅರಸರಾಗಿದ್ದಾಗ ನಾಡಿನ ವಿಶ್ವವಿಖ್ಯಾತ ಎಂಜಿನೀಯರ್ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಕನ್ನಂಬಾಡಿ ಆಣೆಕಟ್ಟಿನ ನಿರ್ಮಾಣ ಕಾರ್ಯ ವಹಿಸಿಕೊಟ್ಟಿದ್ದರು. ಕೆಆರ್ ಎಸ್ ನಿರ್ಮಾಣ ಕೆಲಸ ಪೂರ್ತಿಗೊಂಡಿದ್ದು 1932 ರಲ್ಲಿ. ಈ ಜಲಾಶಯವನ್ನು ನೋಡಲು ದೇಶವಿದೇಶಗಳಿಂದ ಜನ ಪ್ರತಿದಿನ ಮೈಸೂರಿಗೆ ಆಗಮಿಸುತ್ತಾರೆ.

ಮಂಡ್ಯ: ತುಂಗಭದ್ರಾ ಜಲಾಶಯದ ಒಂದು ಕ್ರೆಸ್ಟ್ ಗೇಟ್ ಮುರಿದು ಅವಾಂತರ ಸೃಷ್ಟಿಯಾದ ನಂತರ ರಾಜ್ಯದಲ್ಲಿರುವ ಇತರ ಜಲಾಶಯಗಳು ಎಷ್ಟು ಸುರಕ್ಷಿತ ಎನ್ನುವ ಭೀತಿ ಮತ್ತು ಆತಂಕ ಶುರುವಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ 92 ವರ್ಷಗಳ ಹಿಂದೆ ನಿರ್ಮಾಣವಾದ ಕೆಆರ್​ಎಸ್ ಜಲಾಶಯ ಹಳೆ ಮೈಸೂರು ಭಾಗದ ಜನರ ಜೀವನಾಡಿ. ಶತಮಾನದಷ್ಟು ಹಿಂದೆ ನಿರ್ಮಾಣವಾಗಿದ್ದರೂ ಜಲಾಶಯ ಸೇಫ್ ಆಗಿದೆ ಯಾವುದೇ ಸಮಸ್ಯೆ ಇಲ್ಲವೆಂದು ತಜ್ಞರು ಹೇಳುತ್ತಾರೆಂದು ನಮ್ಮ ವರದಿಗಾರ ತಿಳಿಸುತ್ತಾರೆ. 124.80 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯಕ್ಕೆ ಅಳವಡಿಸಲಾಗಿರುವ ವರ್ಟಿಕಲ್ ಗೇಟ್ ಗಳನ್ನು 10 ವರ್ಷಗಳ ಹಿಂದೆ ಬದಲಾವಣೆ ಮಾಡಲಾಗಿರುವುದರಿಂದ ಗೇಟ್ ಗಳಿಗೆ ಸಂಬಂಧಿಸಿದಂತೆ ಯಾವುದೇ ತೊಂದರೆ ಇಲ್ಲವೆಂದು ತಜ್ಞರು ಹೇಳಿದ್ದಾರೆ. ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಗಳಿಗೆ ಅಳವಡಿಸಿರುವ ಸ್ಟಾಪ್ ಲಾಕ್ ವಿಧಾನ ಕೆಆರ್ ಎಸ್ ಜಲಾಶಯಕ್ಕೆ ಅಳವಡಿಸದಿರೋದು ಸುರಕ್ಷತೆಗೆ ಮತ್ತೊಂದು ಕಾರಣವಾಗಿದೆ. ಎಲ್ಲಕ್ಕೂ ಮುಖ್ಯವಾಗಿ ಕೆಆರ್ ಆಸ್ ಜಲಾಶಯದ ದುರಸ್ತಿ ಕಾರ್ಯಗಳು ಆಗಾಗ್ಗೆ ನಡೆಯುತ್ತಲೇ ಇವೆಯಂತೆ. ಹಾಗಾಗಿ ಹಳೆ ಮೈಸೂರು ಭಾಗದ ಜನ ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕೆಆರ್​ಎಸ್ ಜಲಾಶಯದಲ್ಲಿ ಹೆಚ್ಚಿದ ಒಳಹರಿವು, ಖುಷಿಯಿಂದ ಬೀಗುತ್ತಿರುವ ರೈತಾಪಿ ಸಮುದಾಯ

Published on: Aug 13, 2024 10:39 AM