ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಲು ನಿರಾಕರಿಸಿದ್ದಕ್ಕೆ ಈಶ್ವರಪ್ಪ ತಮ್ಮದೇ ಆದ ಸಮರ್ಥನೆ ನೀಡುತ್ತಿದ್ದಾರೆ!
ಅಮಿತ್ ಶಾ ಅಪೇಕ್ಷೆ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಮತ್ತು ಗೆದ್ದು ದೆಹಲಿಗೆ ಹೋಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಕೈ ಎತ್ತುತ್ತೇನೆ ಎಂದು ಹೇಳುತ್ತಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ತಿಳಿಸಿದರೇ ಅಂತ ಕೇಳಿದಾಗ ಅವರು ಹೇಳಿಲ್ಲ, ಅದರೆ ಅವರು ಹಾಗೆ ಊಹಿಸಿರುತ್ತಾರೆ ಅನ್ನೋದು ತನ್ನ ಭಾವನೆ ಎಂದು ಈಶ್ವರಪ್ಪ ಹೇಳುತ್ತಾರೆ!
ಶಿವಮೊಗ್ಗ: ದೆಹಲಿಗೆ ಬಂದು ಭೇಟಿಯಾಗಿ ಅಂತ ಖುದ್ದು ಅಮಿತ್ ಶಾ (Amit Shah) ಅವರೇ ಹೇಳಿದ್ದರೂ ನಿನ್ನೆ ಅಲ್ಲಿಗೆ ಹೋದಾಗ ಅವರು ಭೇಟಿ ಮಾಡದೆ ವಾಪಸ್ಸು ಕಳಿಸದ್ದಕ್ಕೆ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ತಮ್ಮದೇ ಆದ ಸಮರ್ಥನೆ ನೀಡುತ್ತಿದ್ದಾರೆ. ದೆಹಲಿಯಿಂದ ನಿರಾಶರಾಗಿ ವಾಪಸ್ಸು ಬಂದ ಮೇಲೆ ಶಿವಮೊಗ್ಗದಲ್ಲಿ (Shivamogga) ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಅವರು, ತಾನು ಏನು ಮಾತಾಡಲಿದ್ದೇನೆ ಎಂಬ ಪರಿಕಲ್ಪನೆ ಅಮಿತ್ ಶಾ ಅವರಿಗಿತ್ತು, ತಾನು ಸಿದ್ಧಾಂತಕ್ಕಾಗಿ ಹೋರಾಡುತ್ತಿರುವ ಅಂಶವನ್ನು ಅವರು ಮನಗಂಡಿದ್ದರು. ವಾಪಸ್ಸು ಹೋಗಿ ನಂಬಿಕೊಂಡಿರುವ ಸಿದ್ಧಾಂತd ಹಿನ್ನೆಲೆಯಲ್ಲೇ ಸ್ಪರ್ಧೆ ಮಾಡಲಿ ಅನ್ನೋ ಕಾರಣಕ್ಕೆ ಅವರು ತನ್ನನ್ನು ಭೇಟಿಯಾಗಿಲ್ಲ, ಎಂದು ಈಶ್ವರಪ್ಪ ಹೇಳುತ್ತಾರೆ. ಅವರ ಅಪೇಕ್ಷೆ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಮತ್ತು ಗೆದ್ದು ದೆಹಲಿಗೆ ಹೋಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಕೈ ಎತ್ತುತ್ತೇನೆ ಎಂದು ಹೇಳುತ್ತಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ತಿಳಿಸಿದರೇ ಅಂತ ಕೇಳಿದಾಗ ಅವರು ಹೇಳಿಲ್ಲ, ಅದರೆ ಅವರು ಹಾಗೆ ಊಹಿಸಿರುತ್ತಾರೆ ಅನ್ನೋದು ತನ್ನ ಭಾವನೆ ಎಂದು ಈಶ್ವರಪ್ಪ ಹೇಳುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಳೆ ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸದಂತೆ ಎಚ್ಚರ ವಹಿಸಲು ಅಮಿತ್ ಶಾ ತಾಕೀತು