Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೇಟಿಗೆ ನಿರಾಕರಿಸಿದ ಅಮಿತ್ ಶಾ; ನಿರಾಶರಾಗಿ ಬೆಂಗಳೂರಿಗೆ ವಾಪಸ್ಸಾದ ಕೆಎಸ್ ಈಶ್ವರಪ್ಪ

ಭೇಟಿಗೆ ನಿರಾಕರಿಸಿದ ಅಮಿತ್ ಶಾ; ನಿರಾಶರಾಗಿ ಬೆಂಗಳೂರಿಗೆ ವಾಪಸ್ಸಾದ ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 04, 2024 | 12:35 PM

ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೋನಿಯಾ ಗಾಂಧಿಯವರ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನಡೆಸಿರುವಂತೆ ತಾನು ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ನಡೆಸುತ್ತಿರುವ ಕುಟುಂಬ ರಾಜಕಾರಣದ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿದ್ದೆ ಎಂದ ಈಶ್ವರಪ್ಪ, ತನ್ನ ಪ್ರಶ್ನೆಗಳು ಇರುಸು ಮುರುಸು ಸ್ಥಿತಿಯನ್ನು ಉಂಟು ಮಾಡುತ್ತವೆ ಅನ್ನೋದನ್ನು ಮನಗಂಡೇ ಅಮಿತ್ ಶಾ ತನ್ನನ್ನು ಭೇಟಿಯಾಗಲಿಲ್ಲ ಎಂದರು.

ದೇವನಹಳ್ಳಿ: ಪಕ್ಷದ ವರಿಷ್ಠ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು (Amit Shah) ಭೇಟಿಯಾಗಲು ನಿನ್ನೆ ಉತ್ಸಾಹದಲ್ಲಿ ದೆಹಲಿಗೆ ತೆರಳಿದ್ದ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಅಷ್ಟೇ ನಿರುತ್ಸಾಹದಿಂದ ವಾಪಸ್ಸಾಗಿದ್ದಾರೆ. ತಾನು ಬೇಟಿಯಾಗುವುದಕ್ಕೆ ಅಮಿತ್ ಶಾ ಅವಕಾಶ ಕಲ್ಪಿಸಲಿಲ್ಲ, ಭೇಟಿಯಾಗುವುದು ಬೇಡ ಅಂತ ವಾಪಸ್ಸು ಕಳಿಸಿದರೆಂದು ಈಶ್ವರಪ್ಪ ಹೇಳುತ್ತಾರೆ. ಅವರ ನಿರಾಕರಣೆಗೆ ಕಾರಣಗಳನ್ನೂ ಈಶ್ವರಪ್ಪ ವಿವರಿಸುತ್ತಾರೆ. ತಾನು ಶಿವಮೊಗ್ಗ ಕ್ಷೇತ್ರದಿಂದ (Shivamogga LS seat) ಯಾಕೆ ಸ್ಪರ್ಧಿಸುತ್ತಿದ್ದೇನೆ ಅಂತ ಅವರು ಫೋನ್ ಕರೆ ಮಾಡಿದಾಗಲೇ ವಿವರಿಸಿದ್ದೆ, ತನ್ನೊಂದಿಗೆ ಅವರು ಮಾತಾಡುವಾಗ ಅದೇ ಪ್ರಶ್ನೆಗಳನ್ನು ಕೇಳಲಿದ್ದೇನೆ ಅನ್ನೋದು ಅವರಿಗೆ ಗೊತ್ತಿತ್ತು, ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೋನಿಯಾ ಗಾಂಧಿಯವರ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನಡೆಸಿರುವಂತೆ ತಾನು ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ನಡೆಸುತ್ತಿರುವ ಕುಟುಂಬ ರಾಜಕಾರಣದ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿದ್ದೆ ಎಂದ ಈಶ್ವರಪ್ಪ, ತನ್ನ ಪ್ರಶ್ನೆಗಳು ಇರುಸು ಮುರುಸು ಸ್ಥಿತಿಯನ್ನು ಉಂಟು ಮಾಡುತ್ತವೆ ಅನ್ನೋದನ್ನು ಮನಗಂಡೇ ಅಮಿತ್ ಶಾ ತನ್ನನ್ನು ಭೇಟಿಯಾಗಲಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಈಶ್ವರಪ್ಪ ಚುನಾವಣೆಗೆ ನಿಲ್ಲಲಿ, ರಾಘವೇಂದ್ರ ಸೋಲಲಿ: ಅಮಿತ್ ಶಾ ಸಂದೇಶ ನೀಡಿದ್ದಾರೆ ಎಂದ ಈಶ್ವರಪ್ಪ