ನಾಮಪತ್ರ ಸಲ್ಲಿಸುವ ಮೊದಲು ಮಂಡ್ಯದ ಅರ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಹೆಚ್ ಡಿ ಕುಮಾರಸ್ವಾಮಿ

ನಾಮಪತ್ರ ಸಲ್ಲಿಸುವ ಮೊದಲು ಮಂಡ್ಯದ ಅರ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 04, 2024 | 11:13 AM

ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ಮೊದಲು ಕುಮಾರಸ್ವಾಮಿ, ನಗರಕ್ಕೆ ಹತ್ತಿರದ ಗುತ್ತಲುನಲ್ಲಿರುವ ಅರ್ಕೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಪಕ್ಷದ ನೂರಾರು ಕಾರ್ಯಕರ್ತರು ಕುಮಾರಸ್ವಾಮಿಯೊಂದಿಗಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮಂಡ್ಯ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ದೈಹಿಕ ಮತ್ತು ಮಾನಸಿಕವಾಗಿ ನಿರಾಳವಾಗಿದ್ದಾರೆ ಮತ್ತು ಗೆಲುವಾಗಿದ್ದಾರೆ. ಚೆನೈಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾದ (heart surgery) ಮೇಲೆ ಅರೋಗ್ಯದ ಬಗ್ಗೆ ಈಗ ಚಿಂತೆ ಇಲ್ಲ. ಹಾಗೆಯೇ, ಸುಮಲತಾ ಅಂಬರೀಶ್ (Sumalatha Ambareesh) ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸದೆ ಬಿಎಜೆಪಿ ಸೇರುವ ಘೊಷಣೆಯನ್ನು ನಿನ್ನೆ ಮಾಡಿದ್ದು ಅವರನ್ನು ನಿಶ್ಚಯವಾಗಿ ನಿರಾಳವಾಗಿಸಿದೆ. ಇಂದು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ಮೊದಲು ಕುಮಾರಸ್ವಾಮಿ, ನಗರಕ್ಕೆ ಹತ್ತಿರದ ಗುತ್ತಲುನಲ್ಲಿರುವ ಅರ್ಕೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಪಕ್ಷದ ನೂರಾರು ಕಾರ್ಯಕರ್ತರು ಕುಮಾರಸ್ವಾಮಿಯೊಂದಿಗಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರ ಎದುರಾಳಿ ಕಾಂಗ್ರೆಸ್ ಪಕ್ಷದ ಸ್ಟಾರ್ ಚಂದ್ರು ಆಗಿದ್ದಾರೆ. ಚಂದ್ರು ಒಬ್ಬ ಉದ್ಯಮಿಯೂ ಆಗಿದ್ದು ರಾಜಕಾರಣಕ್ಕೆ ಹೊಸಬರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಜನರಿಗೆ ಹೆದರಿಸುವುದನ್ನು ಬಿಟ್ಟು ಡಿಕೆ ಸಹೋದರರು ಬೇರೆ ಯಾವ ಜನಸೇವೆ ಮಾಡಿದ್ದಾರೆ? ಹೆಚ್ ಡಿ ಕುಮಾರಸ್ವಾಮಿ