ಈಶ್ವರಪ್ಪ ಚುನಾವಣೆಗೆ ನಿಲ್ಲಲಿ, ರಾಘವೇಂದ್ರ ಸೋಲಲಿ: ಅಮಿತ್ ಶಾ ಸಂದೇಶ ನೀಡಿದ್ದಾರೆ ಎಂದ ಈಶ್ವರಪ್ಪ
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ನನ್ನನ್ನು ಭೇಟಿಯಾಗುವುದು ಬೇಡ ಎಂದು ಅಮಿತ್ ಶಾ ಹೇಳಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಈಶ್ವರಪ್ಪ ಚುನಾವಣೆಗೆ ನಿಲ್ಲಲಿ, ರಾಘವೇಂದ್ರ ಚುನಾವಣೆಯಲ್ಲಿ ಸೋಲಲಿ. ಈ ಸಂದೇಶವನ್ನು ಕೇಂದ್ರ ಸಚಿವ ಅಮಿತ್ ಶಾ ನೀಡಿದ್ದಾರೆ ಎಂದು ಹೇಳಿದ್ದಾರೆ.
ನವದೆಹಲಿ, ಮಾರ್ಚ್ 03: ನನ್ನನ್ನು ಭೇಟಿಯಾಗುವುದು ಬೇಡ ಎಂದು ಅಮಿತ್ ಶಾ ಹೇಳಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗುವುದಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಪರೋಕ್ಷವಾಗಿ ಅಮಿತ್ ಶಾ ಸಮ್ಮತಿ ಸಿಕ್ಕಿದೆ. ಅಪ್ಪ, ಮಕ್ಕಳನ್ನು ಸೋಲಿಸಬೇಕಿದೆ. ಈಶ್ವರಪ್ಪ ಚುನಾವಣೆಗೆ ನಿಲ್ಲಲಿ, ರಾಘವೇಂದ್ರ ಚುನಾವಣೆಯಲ್ಲಿ ಸೋಲಲಿ. ಈ ಸಂದೇಶವನ್ನು ಕೇಂದ್ರ ಸಚಿವ ಅಮಿತ್ ಶಾ ನೀಡಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos