ವಿಜಯೇಂದ್ರ ಮಾತಿನ ಧೋರಣೆ ಬದಲಿಸಿದ್ದರೆ ಬೇರೆ ರೀತಿಯಲ್ಲಿ ಉತ್ತರ ಕೊಡಬೇಕಾಗುತ್ತದೆ: ಕೆಎಸ್ ಈಶ್ವರಪ್ಪ
ಅಸಲಿಗೆ ತಮ್ಮ ಸಹೋದರ ರಾಘವೇಂದ್ರ ಚುನಾವಣೆಯಲ್ಲಿ ಸೋಲಲಿದ್ದಾರೆ ಎಂಬ ಭೀತಿ ಅವರಲ್ಲಿ ಹುಟ್ಟಿದೆ, ಹಾಗಾಗೇ ಕಾರ್ಯಕರ್ತರಲ್ಲಿ ಗೊಂದಲ ಹುಟ್ಟಿಸುವ ಮಾತುಗಳನ್ನು ಆಡುತ್ತಿದ್ದಾರೆ, ಹಿಂದೂತ್ವವಾದಿಗಳನ್ನು ಹಿಮ್ಮೆಟ್ಟಿಸುವ ಕೆಲಸ ಎಡೆಬಿಡದೆ ಸಾಗಿದೆ, ಯಡಿಯೂರಪ್ಪ ಕುಟುಂಬಕ್ಕೆ ಜನ ಪಾಠ ಕಲಿಸಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಶಿವಮೊಗ್ಗ: ದೆಹಲಿಯಿಂದ ವಾಪಸ್ಸಾದ ಬಳಿಕ ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಕೆ ಎಸ್ ಈಶ್ವರಪ್ಪ (KS Eshwarappa) ರಾಜ್ಯ ಬಿಜೆಪಿಯ ಶುದ್ಧೀಕರಣ ಆಗಬೇಕಿದೆ ಎಂದು ಮತ್ತೊಮ್ಮೆ ಹೇಳಿ ಆ ಕೆಲಸವನ್ನು ಪಕ್ಷದ ರಾಷ್ಟ್ರೀಯ ನಾಯಕರು (party high command) ಮತ್ತು ರಾಜ್ಯದ ಮತದಾರರು ಮಾಡಲಿದ್ದಾರೆ ಎಂದರು. ಒಬ್ಬ ಸರ್ವಾಧಿಕಾರಿಯಂತೆ ಬಿಎಸ್ ಯಡಿಯೂರಪ್ಪ (BS Yediyurappa) ಪಕ್ಷವನ್ನು ನಡೆಸುತ್ತಿದ್ದಾರೆ, ಬಿವೈ ವಿಜಯೇಂದ್ರ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಮತ್ತು ತನ್ನ ಬಗ್ಗೆಯೂ ಹಗುರವಾವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದ ಈಶ್ವರಪ್ಪ; ಅವರು ತಮ್ಮ ಮಾತಿನ ವರಸೆಯನ್ನು ಬದಲಿಸದಿದ್ದರೆ ತಾನು ಬೇರೆ ರೀತಿಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದರು. ಅಸಲಿಗೆ ತಮ್ಮ ಸಹೋದರ ರಾಘವೇಂದ್ರ ಚುನಾವಣೆಯಲ್ಲಿ ಸೋಲಲಿದ್ದಾರೆ ಎಂಬ ಭೀತಿ ಅವರಲ್ಲಿ ಹುಟ್ಟಿದೆ, ಹಾಗಾಗೇ ಕಾರ್ಯಕರ್ತರಲ್ಲಿ ಗೊಂದಲ ಹುಟ್ಟಿಸುವ ಮಾತುಗಳನ್ನು ಆಡುತ್ತಿದ್ದಾರೆ, ಹಿಂದೂತ್ವವಾದಿಗಳನ್ನು ಹಿಮ್ಮೆಟ್ಟಿಸುವ ಕೆಲಸ ಎಡೆಬಿಡದೆ ಸಾಗಿದೆ, ಯಡಿಯೂರಪ್ಪ ಕುಟುಂಬಕ್ಕೆ ಜನ ಪಾಠ ಕಲಿಸಲಿದ್ದಾರೆ ಮತ್ತು ವರಿಷ್ಠರು ರಾಜ್ಯ ಬಿಜೆಪಿಯ ಶುದ್ಧೀಕರಣದ ಕೆಲಸ ಮಾಡಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರತಾಪ್ ಸಿಂಹನಂಥ ರಾಷ್ಟ್ರಭಕ್ತ ಮತ್ತು ಹಿಂದೂತ್ವವಾದಿಯನ್ನು ಯಾರೂ ಖಂಡಿಸಲಾಗದು: ಕೆ ಎಸ್ ಈಶ್ವರಪ್ಪ