60 ಸೀಟ್​ ಬಸ್ಸಿನಲ್ಲಿ 100ಕ್ಕೂ ಹೆಚ್ಚು ಜನ ಸಂಚಾರ; ಓವರ್ ಲೋಡ್​ನಿಂದ ಕೆಟ್ಟು ನಿಂತ KSRTC ಬಸ್, ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 20, 2023 | 7:44 PM

ಓವರ್ ಲೋಡ್​ನಿಂದ ಘಾಟಿನಲ್ಲಿ ಸಂಚರಿಸಲಾಗದೆ ಕೆಎಸ್​ಆರ್​ಟಿಸಿ(KSRTC) ಬಸ್ ಕೆಟ್ಟು ನಿಂತ ಘಟನೆ ಮೂಡಿಗೆರೆ ತಾಲೂಕಿನ ಜಾವಳಿ ಬಳಿ ನಡೆದಿದೆ. ಇನ್ನು ಬಸ್​ ಇಲ್ಲದೆ ಮಹಿಳೆಯರು ರಸ್ತೆಯಲ್ಲಿ ಸಾಲಾಗಿ ಕೂತಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಶಾಸಕಿ ನಯನಾ ಮೋಟಮ್ಮ, ಜನರ ಸಮಸ್ಯೆ ಕೇಳಿದ್ದು, ಕೆಎಸ್ಆರ್​ಟಿಸಿ ಡಿಸಿಗೆ ಫೋನ್ ಮಾಡಿ ಕೂಡಲೇ ಬಸ್ ಬಿಡುವಂತೆ ಸೂಚಿಸಿದ್ದಾರೆ.

ಚಿಕ್ಕಮಗಳೂರು, ಸೆ.20: 60 ಸೀಟಿನ ಬಸ್ಸಿನಲ್ಲಿ 100ಕ್ಕೂ ಹೆಚ್ಚು ಜನ ಸಂಚಾರ ಮಾಡಿದ್ದು, ಓವರ್ ಲೋಡ್​ನಿಂದ ಘಾಟಿನಲ್ಲಿ ಸಂಚರಿಸಲಾಗದೆ ಕೆಎಸ್​ಆರ್​ಟಿಸಿ(KSRTC) ಬಸ್ ಕೆಟ್ಟು ನಿಂತ ಘಟನೆ ಮೂಡಿಗೆರೆ(mudigere)ತಾಲೂಕಿನ ಜಾವಳಿ ಬಳಿ ನಡೆದಿದೆ. ಇನ್ನು ಬಸ್​ ಇಲ್ಲದೆ ಮಹಿಳೆಯರು ರಸ್ತೆಯಲ್ಲಿ ಸಾಲಾಗಿ ಕೂತಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಶಾಸಕಿ ನಯನಾ ಮೋಟಮ್ಮ, ಜನರ ಸಮಸ್ಯೆ ಕೇಳಿದ್ದು, ಕೆಎಸ್ಆರ್​ಟಿಸಿ ಡಿಸಿಗೆ ಫೋನ್ ಮಾಡಿ ಕೂಡಲೇ ಬಸ್ ಬಿಡುವಂತೆ ಸೂಚಿಸಿದ್ದಾರೆ. ಜೊತೆಗೆ ಬಸ್ ಬರದಿದ್ದರೆ ಫೋನ್ ಮಾಡಿ ಎಂದು ನಂಬರ್ ಕೊಟ್ಟು ಹೋಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ