Loading video

ಮೊಬೈಲ್ ಫೋನಲ್ಲಿ ಬಿಂದಾಸಾಗಿ ರೀಲ್ಸ್ ನೋಡುತ್ತ ಬಸ್ ಓಡಿಸಿದ ಕೆಎಸ್ಸಾರ್ಟಿಸಿ ಬಸ್ ಚಾಲಕ

|

Updated on: Jan 31, 2025 | 2:27 PM

ಈ ವಿಡಿಯೋ ಸುದ್ದಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಂಬಂಧಪಟ್ಟ ಕೆಎಸ್ಸಾರ್ಟಿಸಿ ಅಧಿಕಾರಿಗಳು ಬಹಳ ಸೂಕ್ಷ್ಮವಾಗಿ ಗಮನಿಸಬೇಕಿದೆ. ಇದೇ ಚಾಲಕನ ಹಾಗೆ ಮೊಬೈಲ್ ಉಪಯೋಗಿಸುತ್ತ ವಾಹನ ಓಡಿಸುವ ಅನೇಕ ಚಾಲಕರು ಸಿಗುತ್ತಾರೆ. ಅವರ ಉಡಾಫೆ ಮನೋಭಾವಕ್ಕೆ ಇಲಾಖೆ ಶಿಸ್ತಿನ ಕ್ರಮ ಜರುಗಿಸಬೇಕಿದೆ. ಅನಾಹುತ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವುದರಲ್ಲಿ ಅರ್ಥವಿಲ್ಲ.

ಕೋಲಾರ: ಬೇಜವ್ದಾರಿತನ, ಪ್ರಯಾಣಿಕರ ಪ್ರಾಣದ ಬಗ್ಗೆ ನಿರ್ಲಕ್ಷ್ಯ ಮತ್ತು ವೃತ್ತಿಯೆಡೆ ಉಡಾಫೆ ಮನೋಭಾವ-ಎಲ್ಲವೂ ಮೇಳೈಸಿವೆ ಈ ಚಾಲಕನಲ್ಲಿ! ಇವನನ್ನು ಚಾಲಕ ಅಂತ ಕರೆಯೋದು ಚಾಲಕ ವೃತ್ತಿಗೆ ಅವಮಾನ. ಕೋಲಾರದಿಂದ ಪಾವಗಡ ಹೊರಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಾಯಶಃ ಕೋಲಾರ ಡಿಪೋಗೆ ಸೇರಿದ ಬಸ್ಸಲ್ಲಿ ಈ ಚಾಲಕ ಮೊಬೈಲ್​ನಲ್ಲಿ ರೀಲ್ಸ್ ನೋಡುತ್ತ ವಾಹನವನ್ನು ಓಡಿಸುತ್ತಿದ್ದಾನೆ. ಬಸ್ಸಲ್ಲಿದ್ದ ಪ್ರಯಾಣಿಕರ ಬಗ್ಗೆ ಇವನಿಗೆ ಕಾಳಜಿ, ಪರಿವೆಯೇ ಇಲ್ಲ. ಇವನ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಪ್ರಯಾಣಿಕರಿಗೆ ಏನಾದರೂ ಅಪಾಯವಾದರೆ ಹೊಣೆ ಯಾರು?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  KSRTC ಬಸ್​ ಚಾಲನೆ ವೇಳೆ ಮೊಬೈಲ್​ ಬಳಕೆ: ಚಾಲಕ ಅರೆಸ್ಟ್​

Published on: Jan 28, 2025 11:11 AM