ಸಹಕಾರ ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸುವ ಬದಲು ರಾಜಣ್ಣ ವೃಥಾ ಕಾಲಹರಣ ಮಾಡುತ್ತಿದ್ದಾರೆ: ಕೆಎಸ್ ಆನಂದ್
ರಾಜಣ್ಣ ತಮ್ಮ ಕ್ಷೇತ್ರದ ಕೆಲಸವನ್ನೂ ಸರಿಯಾಗಿ ಮಾಡುತ್ತಿಲ್ಲ, ಜಿಲ್ಲೆಯ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿ ಚುನಾವಣೆಯಲ್ಲಿ ತನ್ನಿಂದ ಸೋತ ಬಿಜೆಪಿ ಅಭ್ಯರ್ಥಿ ಮುಂದುವರಿದಿದ್ದಾರೆ. ರಾಜಣ್ಣ, ಶಿವಾನಂದ ಪಾಟೀಲ್ ಮತ್ತು ಲಕ್ಷ್ಮಣ ಸವದಿ ಬ್ಯಾಂಕಿನ ಡೈರೆಕ್ಟರ್ಗಳಾಗಿದ್ದರೂ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅಧ್ಯಕ್ಷನನ್ನು ಬದಲಾಯಿಸುವುದು ಅವರಿಗೆ ಸಾಧ್ಯವಾಗಿಲ್ಲ ಎಂದು ಆನಂದ್ ಹೇಳಿದರು.
ಚಿಕ್ಕಮಗಳೂರು: ಸಹಕಾರ ಸಚಿವ ಕೆಎನ್ ರಾಜಣ್ಣ ಅವರಿಗೆ ಪಕ್ಷದಲ್ಲಿ ವಿರೋಧ ಹೆಚ್ಚುತ್ತಿದೆ. ನಮ್ಮ ಚಿಕ್ಕಮಗಳೂರು ಪ್ರತಿನಿಧಿಯೊಂದಿಗೆ ಮಾತಾಡಿರುವ ಕಡೂರು ಶಾಸಕ ಕೆಎಸ್ ಆನಂದ್ ಅವರು, ಸಹಕಾರ ಕ್ಷೇತ್ರದ ಜವಾಬ್ದಾರಿ ಹೊತ್ತಿರುವ ರಾಜಣ್ಣ ತಮ್ಮ ಕೆಲಸವನ್ನು ಮಾಡೋದು ಬಿಟ್ಟು ಪಕ್ಷದ ಬೇರೆ ಆಯಾಮಗಳಲ್ಲಿ ಮೂಗು ತೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು. ನೀರಾವರಿ ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ರಾಜಣ್ಣ ಯಾಕೆ ಬದಲಾವಣೆ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುತ್ತಾರೋ? ಎಂದು ಆನಂದ್ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೆಎನ್ ರಾಜಣ್ಣಗೆ ಕೆಪಿಸಿಸಿ ಅಧ್ಯಕ್ಷನಾಗುವಾಸೆ, ಅದರೆ ಹೈಕಮಾಂಡ್ ಸಹ ಹಾಗೆ ಯೋಚಿಸುತ್ತದೆಯೇ?
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ

