AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಕ್ತಿತ್ವ ಬದಲಾಯಿಸಿಕೊಳ್ಳಲು ಬಿಗ್ ಬಾಸ್ 11 ಸೀಸನಲ್ಲಿ ಸ್ಪರ್ಧಿಯಾಗಲು ಒಪ್ಪಿಕೊಂಡೆ: ಉಗ್ರಂ ಮಂಜು

ವ್ಯಕ್ತಿತ್ವ ಬದಲಾಯಿಸಿಕೊಳ್ಳಲು ಬಿಗ್ ಬಾಸ್ 11 ಸೀಸನಲ್ಲಿ ಸ್ಪರ್ಧಿಯಾಗಲು ಒಪ್ಪಿಕೊಂಡೆ: ಉಗ್ರಂ ಮಂಜು

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 28, 2025 | 1:20 PM

Share

‘ಮ್ಯಾಕ್ಸಿಮ’ ಚಿತ್ರದ ನಂತರ ಒಂದೆರಡು ಆಫರ್ ಗಳು ಬಂದಿದ್ದವು ಮತ್ತು ಮುಂಗಡವನ್ನೂ ಪಡೆದಾಗಿತ್ತು ಎಂದು ಉಗ್ರಂ ಮಂಜು ಹೇಳುತ್ತಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕಾಗಿ ಸಿನಿಮಾಗಳನ್ನು ರದ್ದು ಮಾಡಿ ಮುಂಗಡವನ್ನು ವಾಪಸ್ಸು ನೀಡಿದೆ ಎಂದು ಹೇಳುವ ಮಂಜು, ಶೋನಲ್ಲಿ ತ್ರಿವಿಕ್ರಮ್ ಮತ್ತು ರಂಜಿತ್ ಮೊದಲಾದ ಸ್ಪರ್ಧಿಗಳು ತನಗೆ ಹೇಗೆ ಮೋಸ ಮಾಡಿದರು ಅನ್ನೋದನ್ನು ಹೇಳಿಕೊಂಡಿದ್ದಾರೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ಗೆಲ್ಲಬಹುದಾಗಿದ ಕಾಂಟೆಸ್ಟಂಟ್​ಗಳಲ್ಲಿ ಒಬ್ಬರಾಗಿದ್ದ ಉಗ್ರಂ ಮಂಜು (ಮಂಜುನಾಥ ಗೌಡ) ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಗೌತಮಿ ಜಾಧವ್ ಜೊತೆ ಅತಿಯಾದ ಸ್ನೇಹ ಪ್ರಶಸ್ತಿ ಗೆಲ್ಲುವುದಕ್ಕೆ ತಡೆಯೊಡ್ಡಿತು ಅಂತ ಹೇಳುವವರೂ ಇದ್ದಾರೆ. ಟಿವಿ9 ಪ್ರತಿನಿಧಿಯೊಂದಿಗೆ ನಡೆಸಿರುವ ಮುಕ್ತ ಮಾತುಕತೆಯಲ್ಲಿ ಅವರು ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ. ಚಿತ್ರನಟನಾಗಿ ಕೆಲಸ ಮಾಡುತ್ತಿದ್ದರೂ ಮಂಜುಗೆ ಹೆಚ್ಚಿನ ಎಕ್ಸ್​ಪೋಶರ್ ನೀಡಿದ್ದು ಬಿಗ್ ಬಾಸ್ ರಿಯಾಲಿಟಿ ಶೋ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಲು ಮತ್ತು ರಿಯಾಲಿಟಿ ಶೋಗಳ ಅನುಭವ ಪಡೆಯಲು ತಾನು ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಲು ಒಪ್ಪಿಕೊಂಡೆ ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಉಗ್ರಂ ಮಂಜು ಕೈ ತಪ್ಪಿತು ಬಿಗ್ ಬಾಸ್ ಟ್ರೋಫಿ; ಫಿನಾಲೆ ದಿನವೇ ಕನಸು ಭಗ್ನ