ಉಗ್ರಂ ಮಂಜು ಕೈ ತಪ್ಪಿತು ಬಿಗ್ ಬಾಸ್ ಟ್ರೋಫಿ; ಫಿನಾಲೆ ದಿನವೇ ಕನಸು ಭಗ್ನ
ಖ್ಯಾತ ನಟ ಉಗ್ರಂ ಮಂಜು ಅವರು ಬಿಗ್ ಬಾಸ್ ಆಟದಿಂದ ಔಟ್ ಆಗಿದ್ದಾರೆ. ನೂರಾರು ದಿನಗಳ ಕಾಲ ಪೈಪೋಟಿ ನೀಡಿದ್ದ ಅವರು ಫಿನಾಲೆ ತಲುಪಿದ್ದರು. ಆದರೆ ಟ್ರೋಫಿ ಗೆಲ್ಲಬೇಕು ಎಂಬ ಅವರ ಕನಸು ನನಸಾಗಲೇ ಇಲ್ಲ. ಕೊನೇ ಹಂತದಲ್ಲಿ ಅವರು ಎಲಿಮಿನೇಟ್ ಆಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಉಗ್ರಂ ಮಂಜು ಎಲಿಮಿನೇಟ್ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಅವರು ಬಿಗ್ ಬಾಸ್ ಶೋಗೆ ಬಂದ ನಂತರ ಜನಪ್ರಿಯತೆ ಹೆಚ್ಚಾಯಿತು. ಈ ಸೀಸನ್ನಲ್ಲಿ ತುಂಬ ಸ್ಟ್ರಾಂಗ್ ಸ್ಪರ್ಧಿ ಎಂದು ಉಗ್ರಂ ಮಂಜು ಗುರುತಿಸಿಕೊಂಡಿದ್ದರು. ಆರಂಭದಲ್ಲಿ ಅವರ ಆಟ ಚೆನ್ನಾಗಿ ಇತ್ತು. ಆದರೆ ನಂತರದ ದಿನಗಳಲ್ಲಿ ಅವರು ಮಂಕಾದರು. ಟಾಸ್ಕ್ನಲ್ಲಿ ಮುಂದಿದ್ದರೂ ಕೂಡ ಮನರಂಜನೆಯಲ್ಲಿ ಮಂಜು ಹಿಂದುಳಿದರು. ಹಾಗಾಗಿ ಅವರು ಫಿನಾಲೆಯಲ್ಲಿ ಔಟ್ ಆಗಬೇಕಾಯಿತು.
ಉಗ್ರಂ ಮಂಜು ಅವರಿಗೆ ಬಿಗ್ ಬಾಸ್ ಟ್ರೋಫಿಯ ಅನಿವಾರ್ಯತೆ ಬಹಳ ಇತ್ತು. ಅದನ್ನು ಅವರು ಬಹಳ ಬಾರಿ ಹೇಳಿಕೊಂಡಿದ್ದರು. ಆದರೆ ಟ್ರೋಫಿ ಗೆಲ್ಲುವಲ್ಲಿ ಉಗ್ರಂ ಮಂಜು ವಿಫಲರಾದರು. ವೀಕ್ಷಕರಿಂದ ಮಂಜು ಅವರಿಗೆ ಉತ್ತಮ ಬೆಂಬಲ ಇತ್ತು. ಆ ಕಾರಣದಿಂದಲೇ ಫಿನಾಲೆ ಹಂತಕ್ಕೆ ಅವರು ಬಂದಿದ್ದರು. ಆದರೆ ಇನ್ನುಳಿದ ಸ್ಪರ್ಧಿಗಳು ಮೈಲುಗೈ ಸಾಧಿಸಿದ್ದರಿಂದ ಉಗ್ರಂ ಮಂಜು ಅವರುಗೆ ಹಿನ್ನೆಡೆ ಆಯಿತು.
ಬಿಗ್ ಬಾಸ್ ಮನೆಯ ಒಳಗಡೆ ಉಗ್ರಂ ಮಂಜು ಅವರನ್ನು ಕಂಡರೆ ಘಟಾನುಘಟಿ ಸ್ಪರ್ಧಿಗಳು ಕೂಡ ಹೆದರುತ್ತಿದ್ದರು. ಆ ಚಾರ್ಮ್ ಉಳಿಸಿಕೊಳ್ಳಲು ಮಂಜು ಇನ್ನಷ್ಟು ಆ್ಯಕ್ಟೀವ್ ಆಗಿರಬೇಕಿತ್ತು. ಆದರೆ ಅದನ್ನು ಅವರು ಗಮನದಲ್ಲಿ ಇಟ್ಟುಕೊಳ್ಳಲಿಲ್ಲ. ಗೌತಮಿ ಜಾದವ್ ಜೊತೆ ಉಗ್ರಂ ಮಂಜು ಅವರು ಸಿಕ್ಕಾಪಟ್ಟೆ ಆತ್ಮೀಯತೆ ಹೊಂದಿದ್ದರು. ಅದರಿಂದ ಅವರ ಆಟಕ್ಕೆ ಅಡ್ಡಿ ಆಗಿತ್ತು. ಈ ಬಗ್ಗೆ ಹಲವು ಬಾರಿ ಸುದೀಪ್ ಎಚ್ಚರಿಕೆ ನೀಡಿದ್ದರೂ ಕೂಡ ಮಂಜು ಎಚ್ಚೆತ್ತುಕೊಂಡಿರಲಿಲ್ಲ.
ಇದನ್ನೂ ಓದಿ: ಸುದೀಪ್ ಇಲ್ಲದ ಬಿಗ್ ಬಾಸ್ ಊಹಿಸೋಕೆ ಆಗಲ್ಲ; ಮುಂದಿನ ಆಯ್ಕೆ ಏನು?
ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿದ ಉಗ್ರಂ ಮಂಜು ಅವರು ರಿಯಲ್ ಲೈಫ್ನಲ್ಲಿ ಸ್ವಲ್ಪ ಎಮೋಷನಲ್ ವ್ಯಕ್ತಿ. ಈ ಶೋನಿಂದ ಅವರ ರಿಯಲ್ ವ್ಯಕ್ತಿತ್ವ ಏನು ಎಂಬುದು ಜನರಿಗೆ ಗೊತ್ತಾಗಿದೆ. ಅವರ ಕುಟುಂಬದ ಬಗ್ಗೆಯೂ ಪ್ರೇಕ್ಷಕರಿಂದ ಗೊತ್ತಾಗಿದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಅವರಿಗೆ ಸಿನಿಮಾ ಅವಕಾಶಗಳು ಹೆಚ್ಚುವ ನಿರೀಕ್ಷೆ ಇದೆ. ಹಲವು ಪ್ರಾಜೆಕ್ಟ್ಗಳು ಅವರ ಕೈಯಲ್ಲಿ ಇವೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದಲ್ಲಿ ಕೂಡ ಉಗ್ರಂ ಮಂಜು ಒಂದು ಮುಖ್ಯವಾದ ಪಾತ್ರ ಮಾಡಿದ್ದಾರೆ. ಸಿನಿಮಾ ಸಕ್ಸಸ್ ಆಗಿದ್ದಕ್ಕೆ ಅವರಿಗೆ ಖುಷಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.