ಬಿಗ್​ಬಾಸ್​ನಲ್ಲಿ ಇತಿಹಾಸ ಸೃಷ್ಟಿಸಿದ ಹನುಮಂತು, ರಜತ್, ಭೇಷ್ ಎಂದ ಕಿಚ್ಚ

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ರ ಫಿನಾಲೆಯಲ್ಲಿ ರಜತ್, ಹನುಮಂತು, ಮೋಕ್ಷಿತಾ, ಉಗ್ರಂ ಮಂಜು, ತ್ರಿವಿಕ್ರಮ್ ಉಳಿದುಕೊಂಡಿದ್ದಾರೆ. ಆದರೆ ಹನುಮಂತು ಮತ್ತು ರಜತ್ ಮಾತ್ರ ಬಿಗ್​ಬಾಸ್ ಕನ್ನಡ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಕಿಚ್ಚ ಸುದೀಪ್ ಇಂದ ಭೇಷ್ ಎನಿಸಿಕೊಂಡಿದ್ದಾರೆ.

ಬಿಗ್​ಬಾಸ್​ನಲ್ಲಿ ಇತಿಹಾಸ ಸೃಷ್ಟಿಸಿದ ಹನುಮಂತು, ರಜತ್, ಭೇಷ್ ಎಂದ ಕಿಚ್ಚ
Hanumantha Rajath
Follow us
ಮಂಜುನಾಥ ಸಿ.
|

Updated on: Jan 26, 2025 | 7:28 PM

ಬಿಗ್​ಬಾಸ್ ಕನ್ನಡ ಸೀಸನ್ 11 ರ ಫಿನಾಲೆ ನಡೆಯುತ್ತಿದೆ. ಆರು ಮಂದಿ ಫೈನಲಿಸ್ಟ್​ಗಳಲ್ಲಿ ಶನಿವಾರದ ದಿನ ಭವ್ಯಾ ಗೌಡ ಎಲಿಮಿನೇಟ್ ಆಗಿದ್ದಾರೆ. ಈಗ ಮನೆಯಲ್ಲಿ ಉಳಿದಿರುವುದು ಐದು ಮಂದಿ ಮಾತ್ರ. ಮೋಕ್ಷಿತಾ, ಉಗ್ರಂ ಮಂಜು, ಹನುಮಂತು, ರಜತ್ ಮತ್ತು ತ್ರಿವಿಕ್ರಮ್ ಅವರುಗಳು ಬಿಗ್​ಬಾಸ್ ಟ್ರೋಫಿಗಾಗಿ ಸೆಣಸುತ್ತಿದ್ದು, ಇಂದು ರಾತ್ರಿಯೇ ವಿಜೇತರ ಘೋಷಣೆ ಆಗಲಿದೆ. ಐವರು ಫೈನಲಿಸ್ಟ್​ಗಳಲ್ಲಿ ರಜತ್ ಮತ್ತು ಹನುಮಂತು ಮಾತ್ರ ತುಸು ಭಿನ್ನ ಅದಕ್ಕೆ ಕಾರಣವೂ ಇದೆ.

ಹನುಮಂತು ಮತ್ತು ರಜತ್ ಅವರುಗಳು ಬಿಗ್​ಬಾಸ್ ಸೀಸನ್ ಪ್ರಾರಂಭವಾದಾಗ ಮನೆ ಸೇರಿದವರಲ್ಲ. ಬದಲಿಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರು. ಬಿಗ್​ಬಾಸ್ ಆರಂಭವಾದ ಮೂರು ವಾರಗಳ ಬಳಿಕ ಹನುಮಂತು ಮನೆಗೆ ಎಂಟ್ರಿ ಕೊಟ್ಟರು. ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಹನುಮಂತನನ್ನು ಶೋಗೆ ಕರೆತರಲಾಯ್ತು. ಜಗದೀಶ್ ಮತ್ತು ರಂಜಿತ್ ಪರಸ್ಪರ ಹೊಡೆದಾಡಿಕೊಂಡ ಕಾರಣ ಅವರನ್ನು ಮನೆಯಿಂದ ಹೊರಗೆ ಹಾಕಲಾಯ್ತು. ಬರೀ ಜಗಳವೇ ತುಂಬಿದ್ದ ಮನೆಗೆ ಹನುಮಂತನ ಎಂಟ್ರಿ ಆಯ್ತು. ಆ ನಂತರ ಮನೆಯ ವಾತಾವರಣವೇ ಬದಲಾಯ್ತು.

ಬಿಗ್​ಬಾಸ್ ಪ್ರಾರಂಭವಾಗಿ 50 ದಿನದ ಬಳಿಕ ರಜತ್ ಎಂಟ್ರಿ ಆಯ್ತು. ಉಗ್ರಂ ಮಂಜು, ತ್ರಿವಿಕ್ರಮ್ ಅವರನ್ನು ಹೊರತುಪಡಿಸಿದರೆ ಬೇರೆ ಸ್ಪರ್ಧಿಯೇ ಮನೆಯಲ್ಲಿಲ್ಲ ಎಂದುಕೊಳ್ಳುವ ಸಮಯದಲ್ಲಿ ಬಂದ ರಜತ್, ತಮ್ಮ ನೇರಾ-ನೇರಾ ಆಟದ ವೈಖರಿಯಿಂದ ಹಲವರನ್ನು ಮನೆಯಿಂದ ಹೊರಗೆ ಹಾಕಿದರು. ಇದೀಗ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಇಬ್ಬರು ಆಟಗಾರರು ಫೈನಲಿಸ್ಟ್​ಗಳಾಗಿದ್ದಾರೆ. ಇದು ಬಿಗ್​ಬಾಸ್ ಕನ್ನಡ ಇತಿಹಾಸದಲ್ಲೇ ಮೊದಲು.

ಇದನ್ನೂ ಓದಿ:ಕೊನೆಯ ಮೆಟ್ಟಿಲಲ್ಲಿ ಎಡವಿದ ಭವ್ಯಾ, ಬಿಗ್​ಬಾಸ್ ಮನೆಯಿಂದ ಹೊರಕ್ಕೆ

ಫಿನಾಲೆ ವೇದಿಕೆಯಲ್ಲಿ ಈ ವಿಷಯ ಮಾತನಾಡಿದ ಸುದೀಪ್, ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರಿಗೆ ಒಂದು ಅಡ್ವಾಂಟೇಜ್ ಜೊತೆಗೆ ಹಲವು ಡಿಸ್ ಅಟ್ವಾಂಟೇಜ್​ಗಳು ಸಹ ಇರುತ್ತವೆ. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರು ಶೋ ಅನ್ನು ನೋಡಿ, ಸ್ಪರ್ಧಿಗಳ ಮನಸ್ಥಿತಿ, ವ್ಯಕ್ತಿತ್ವ ಇನ್ನಿತರೆಗಳನ್ನು ಅರ್ಥ ಮಾಡಿಕೊಂಡು ಒಳಗೆ ಹೋಗಿರುತ್ತಾರೆ. ಅವರಿಗೆ ಗೇಮ್ ಪ್ಲ್ಯಾನ್ ಮಾಡುವುದು ಸುಲಭ ಹಾಗಿದ್ದರೂ ಸಹ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರು ಎರಡು ಮೂರು ವಾರಕ್ಕೂ ಹೆಚ್ಚು ಉಳಿದಿದ್ದೇ ಇಲ್ಲ ಎಂದಿದ್ದಾರೆ ಸುದೀಪ್.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರಿಗೆ ಸದಾ ಎದುರಾಗುವ ಒಂದು ಸಮಸ್ಯೆ ಎಂದರೆ ಮನೆಯ ಒಳಗಿರುವವರು ಅವರನ್ನು ಸದಾ ಹೊರಗಿನವರಂತೆ ನೋಡುತ್ತಾರೆ. ನಮ್ಮಷ್ಟು ಕಷ್ಟ ನೀನು ಪಟ್ಟಿಲ್ಲ, ಅರ್ಧಕ್ಕೆ ಬಂದವನು ಎಂದು ಛೇಡಿಸುತ್ತಾರೆ. ಇಷ್ಟೆಲ್ಲ ಇದ್ದರೂ ಸಹ ನೀವು ಎಲ್ಲವನ್ನೂ ಎದುರಿಸಿಕೊಂಡು ಫಿನಾಲೆ ವರೆಗೆ ಬಂದಿದ್ದೀರಿ. ಇದು ಸಾಮಾನ್ಯ ಸಾಧನೆಯಲ್ಲ. ಬಿಗ್​ಬಾಸ್ ಇತಿಹಾಸದಲ್ಲೇ ಫಿನಾಲೆ ತಲುಪಿದ ವೈಲ್ಡ್ ಕಾರ್ಡ್ ಸ್ಪರ್ಧಿಗಳು ನೀವು ಎಂದು ಭೇಷ್ ಎಂದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು