ಕೊನೆಯ ಮೆಟ್ಟಿಲಲ್ಲಿ ಎಡವಿದ ಭವ್ಯಾ, ಬಿಗ್ಬಾಸ್ ಮನೆಯಿಂದ ಹೊರಕ್ಕೆ
Bigg Boss Kannada season 11: ಬಿಗ್ಬಾಸ್ ಕನ್ನಡ ಸೀಸನ್ 11 ರ ಫಿನಾಲೆ ನಡೆಯುತ್ತಿದೆ. ಶನಿವಾರ ಮತ್ತು ಭಾನುವಾರ ಫಿನಾಲೆ ನಡೆಯಲಿದ್ದು, ಶನಿವಾರದ ಎಪಿಸೋಡ್ನಲ್ಲಿ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ. ಅವರಲ್ಲಿ ಭವ್ಯಾ ಗೌಡ ಸಹ ಒಬ್ಬರು. ಆದರೆ ಬಿಗ್ಬಾಸ್ ಕಪ್ಗೆ ಹತ್ತಿರವಾಗಿದ್ದಾಗ
ಬಿಗ್ಬಾಸ್ ಕನ್ನಡ ಸೀಸನ್ 11 ಫಿನಾಲೆ ಚಾಲ್ತಿಯಲ್ಲಿದೆ. ಶನಿವಾರದ ಫಿನಾಲೆ ಎಪಿಸೋಡ್ಗೆ ಅದ್ಧೂರಿಯಾಗಿ ವೇದಿಕೆಗೆ ಎಂಟ್ರಿ ಕೊಟ್ಟ ಸುದೀಪ್ ತಮ್ಮ ಎಂದಿನ ಜೋಷ್ನಲ್ಲಿ ಫಿನಾಲೆ ನಡೆಸುತ್ತಿದ್ದಾರೆ. ಫಿನಾಲೆ ವಾರದಲ್ಲಿ ಆರು ಮಂದಿ ಮನೆಯಲ್ಲಿದ್ದರು. ರಜತ್, ಭವ್ಯಾ ಗೌಡ, ಉಗ್ರಂ ಮಂಜು, ಮೋಕ್ಷಿತಾ ಮತ್ತು ತ್ರಿವಿಕ್ರಮ್ ಅವರುಗಳು ಕೊನೆಯಲ್ಲಿ ಉಳಿದುಕೊಂಡಿದ್ದರು. ಇವರಲ್ಲಿ ಇಬ್ಬರು ಶನಿವಾರ ಎಲಿಮಿನೇಟ್ ಆದರೆ ಉಳಿದ ನಾಲ್ವರಲ್ಲಿ ಭಾನುವಾರ ಹೊರ ಹೋಗುವುದು ಯಾರು ಎಂಬುದು ಪ್ರಶ್ನೆಯಾಗಿತ್ತು.
ಶನಿವಾರದ ಎಪಿಸೋಡ್ನಲ್ಲಿ ಭವ್ಯಾ ಗೌಡ ಬಿಗ್ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ. ಫಿನಾಲೆ ವರೆಗೆ ಅದ್ಭುತವಾಗಿ ಆಡುತ್ತಾ ಬಂದಿದ್ದ ಭವ್ಯಾ ಗೌಡ ಟ್ರೋಫಿ ಹಿಡಿಯಲು ಇನ್ನೊಂದು ಮೆಟ್ಟಿಲಷ್ಟೆ ಇರುವಾಗ ಬಿಗ್ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಶನಿವಾರದ ಫಿನಾಲೆ ಎಪಿಸೋಡ್ನಲ್ಲಿ ಭವ್ಯಾ ಗೌಡ ಎಲಿಮಿನೇಟ್ ಆಗಿದ್ದಾರೆ.
ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದಿದ್ದ ಭವ್ಯಾ, ತ್ರಿವಿಕ್ರಮ್ ಜೊತೆಗೆ ಆಪ್ತವಾಗಿದ್ದರು. ಆದರೆ ಕೆಲವು ಸಂದರ್ಭದಲ್ಲಿ ಅದೇ ಅವರಿಗೆ ಮುಳುವಾಯ್ತು. ಕೊನೆ-ಕೊನೆಗೆ ತ್ರಿವಿಕ್ರಮ್ ಜೊತೆಗೂ ಜಗಳ ಮಾಡಿಕೊಂಡರು. ಒಂಟಿಯಾಗಿ ಆಡಲು ಮುಂದಾದರು. ಮೋಕ್ಷಿತಾ ಜೊತೆಗೂ ಕೈ ಜೋಡಿಸಿದರು. ಒಟ್ಟಾರೆಯಾಗಿ ಒಳ್ಳೆಯ ಹೋರಾಟವನ್ನೇ ನೀಡಿದ ಭವ್ಯಾ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.
ಆರು ಮಂದಿ ಫಿನಾಲೆ ಸ್ಪರ್ಧಿಗಳಲ್ಲಿ ಮೊದಲಿಗರಾಗಿ ಭವ್ಯಾ ಗೌಡ ಹೊರಗೆ ಬಂದಿದ್ದಾರೆ. ಅವರಿಗೆ 64 ಲಕ್ಷಕ್ಕೂ ಹೆಚ್ಚು ಮತಗಳು ಲಭಿಸಿವೆ. ಫಿನಾಲೆ ರೇಸ್ನಲ್ಲಿದ್ದ ಆರು ಮಂದಿಯಲ್ಲಿ ಭವ್ಯಾ ಅವರಿಗೆ ಅತ್ಯಂತ ಕಡಿಮೆ ಮತಗಳು ಬಂದಿವೆ ಹಾಗಾಗಿ ಭವ್ಯಾ ಗೌಡ ಎವಿಕ್ಟ್ ಆಗಿದ್ದಾರೆ. ಭವ್ಯಾ ಎವಿಕ್ಷನ್ ಇಂದಾಗಿ ಈಗ ಮನೆಯಲ್ಲಿ ರಜತ್, ಮೋಕ್ಷಿತಾ, ಉಗ್ರಂ ಮಂಜು, ಹನುಮಂತು ಮತ್ತು ತ್ರಿವಿಕ್ರಮ್ ಅವರು ಮಾತ್ರವೇ ಉಳಿದಂತಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:28 pm, Sat, 25 January 25