ನೆಲಮಂಗಲದ ಬಳಿ ಕೆಎಸ್ಆರ್ಟಿಸಿ ಬಸ್ಸೊಂದು ಅಪಾಯಕಾರಿಯಾಗಿ ಡಿವೈಡರ್ಗೆ ಗುದ್ದಿ ಅದರ ಮೇಲೆ ಓಲಾಡಿದರೂ ಪ್ರಾಣಾಪಾಯಗಳಿಲ್ಲ
ವಾಹನದ ಮುಂದಿನ ಟೈರ್ ಗಳು ಸಹ ಕಿತ್ತು ಬಂದಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಹೆಚ್ಚಿನ ಪ್ರಮಾಣದಲ್ಲಿ ಜಖಂಗೊಂಡಿರುವ ಬಸ್ಸನ್ನು ಕ್ರೇನ್ ಸಹಾಯದಿಂದ ಡಿವೈಡರ್ ಮೇಲಿಂದ ಎತ್ತಿರುವುದು ನಿಜ ಅದರೆ ಅದನ್ನು ಹತ್ತಿರದ ಡಿಪೋಗೆ ಟೋ ಮಾಡಿಕೊಂಡು ಹೋಗುವುದು ಸಹ ಸಾಧ್ಯವಿಲ್ಲ.
ನೆಲಮಂಗಲ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ (KSRTC) ಸೇರಿದ ಈ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಜನ, ಅದರ ಚಾಲಕ ಮತ್ತು ನಿರ್ವಾಹಕ ನಿಜಕ್ಕೂ ಅದೃಷ್ಟವಂತರು ಮಾರಾಯ್ರೇ. ಅಪಘಾತದ ಪ್ರಮಾಣ ಇನ್ನೂ ಸ್ವಲ್ಪ ಹೆಚ್ಚಿದ್ದರೆ ಅದು ಫ್ಲೈಓವರ್ (flyover) ಮೇಲಿಂದ ಕೆಳಗೆ ಬೀಳುತಿತ್ತು. ದುರ್ಘಟನೆಯಲ್ಲಿ ಕೇವಲ 5 ಜನ ಮಾತ್ರ ಗಾಯಗೊಂಡಿದ್ದಾರೆ ಮತ್ತು ಅವರಿಗೆ ನೆಲಮಂಗಲದ ಖಾಸಗಿ ಆಸ್ಪತ್ರೆಯೊಂದರಲ್ಲಿ (private hospital in Nelamangala) ಚಿಕಿತ್ಸೆ ಒದಗಿಸಿಸಲಾಗಿದೆ. ಬೆಂಗಳೂರು ಕಡೆ ಬರುತ್ತಿದ್ದ ಬಸ್ಸು ಬೆಂಗಳೂರು ತಾಲ್ಲೂಕಿನ ಅಡಕಮಾರನಹಳ್ಳಿ ಬಳಿ ಚಾಲಕನ ನಿಯಂತ್ರಣನ ತಪ್ಪಿ ಡಿವೈಡರ್ ಗೆ ಗುದ್ದಿದ್ದರಿಂದ ಅಪಘಾತ ಸಂಭವಿಸಿದೆ. ಬಸ್ಸಿನ ಹಿಂಭಾಗ ಎಕ್ಸೆಲ್ ಮುರಿದು ಕೆಳಗೆ ಬಿದ್ದಿರುವುದನ್ನು ನೋಡಬಹುದು. ವಾಹನದ ಮುಂದಿನ ಟೈರ್ ಗಳು ಸಹ ಕಿತ್ತು ಬಂದಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಹೆಚ್ಚಿನ ಪ್ರಮಾಣದಲ್ಲಿ ಜಖಂಗೊಂಡಿರುವ ಬಸ್ಸನ್ನು ಕ್ರೇನ್ ಸಹಾಯದಿಂದ ಡಿವೈಡರ್ ಮೇಲಿಂದ ಎತ್ತಿರುವುದು ನಿಜ ಅದರೆ ಅದನ್ನು ಹತ್ತಿರದ ಡಿಪೋಗೆ ಟೋ ಮಾಡಿಕೊಂಡು ಹೋಗುವುದು ಸಹ ಸಾಧ್ಯವಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾರು ಅಪಘಾತದಲ್ಲಿ ಮೃತಪಟ್ಟಿಲ್ಲ ಕಿರುತೆರೆ ನಟಿ ಪವಿತ್ರಾ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಪತಿ