ತನ್ನ ರೀಲ್ಸ್ ಇಷ್ಟಪಡುತ್ತಿದ್ದ ಯುಕನನ್ನು ಮದುವೆಯಾದ ಯುವತಿ ಈಗ ಅವನಿಗಾಗಿ ಹುಡುಕಾಟ ನಡೆಸಿದ್ದಾಳೆ!
ರಕ್ಷಿತಾ ಮತ್ತು ಪ್ರತಾಪ್ ತಿರುಪತಿಯಲ್ಲಿ ಹಾರ ಬದಲಾಯಿಸಿಕೊಂಡು ಸತಿಪತಿಗಳಾಗಿದ್ದಾರೆ ಮತ್ತು ಪ್ರತಾಪ್ ಎರಡು ಸಲ ಆಕೆಯ ಅಬಾರ್ಷನ್ ಕೂಡ ಮಾಡಿಸಿದ್ದಾನೆ. ಪ್ರತಾಪ್ಗೆ ಹುಡುಗಿಯರ ಹುಚ್ಚು ಜಾಸ್ತಿ ಮತ್ತು ಮದುವೆಯಾಗಿರುವ ಮಹಿಳೆಯರ ಮೇಲೆ ಹೆಚ್ಚು ವ್ಯಾಮೋಹ ಅಂತ ರಕ್ಷಿತಾ ಹೇಳುತ್ತಾರೆ. ಅಷ್ಟೆಲ್ಲ ಗೊತ್ತಿದಾಗ್ಯೂ ಈ ಮಹಾರಾಯ್ತಿ ಅವನನ್ನು ಯಾಕೆ ಮದುವೆಯಾದರೂ ಅನ್ನೋದೇ ಅರ್ಥಾವಾಗದ ವಿಷಯ.
ರಾಮನಗರ, ಜೂನ್11: ಯುವತಿ ಹೇಳುತ್ತಿರೋದೆಲ್ಲ ನಿಜವಾದರೆ ಕೆಎಸ್ಆರ್ಟಿಸಿಯಲ್ಲಿ (KSRTC) ಡ್ರೈವರೋ ಅಥವಾ ಕಂಡಕ್ಟರೋ ಆಗಿ ಕೆಲಸ ಮಾಡುವ ಭಂಡ ಪ್ರತಾಪ್ನಿಂದ ಈಕೆಗೆ ಭಾರೀ ಮೋಸವಾಗಿದೆ, ಅನ್ಯಾಯವಾಗಿದೆ. ರೀಲ್ಸ್ ಮಾಡಿಕೊಂಡಿದ್ದ ರಕ್ಷಿತಾಗೆ ಅದರ ಮೂಲಕವೇ ಪ್ರತಾಪನ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ, ನಂತರ ಅದು ಪ್ರಣಯದಲ್ಲಿ ಮಾರ್ಪಟ್ಟು ಇಬ್ಬರು ಮದುವೆ ಕೂಡ ಆಗಿದ್ದಾರೆ. ಸಮಸ್ಯೆಯೇನೆಂದರೆ ಯುವತಿ ಎಸ್ಸಿ ಸಮುದಾಯಕ್ಕೆ ಸೇರಿದವರು ಮತ್ತು ಪ್ರತಾಪ್ ಒಕ್ಕಲಿಗ ಗೌಡ. ಪ್ರತಾಪ್ ಅಮ್ಮನಿಗೆ ರಕ್ಷಿತಾ ಬೇಕಿಲ್ಲ, ತಮ್ಮ ಸಮುದಾಯದ ಯುವತಿಯನ್ನು ಮದುವೆಯಾಗು, ಮನೆ ತುಂಬಿಸಿಕೊಳ್ತೀನಿ ಅಂತಾರಂತೆ. ಪ್ರತಾಪ್ ಒಂದು ವರ್ಷ ಕಾಲ ರಕ್ಷಿತಾಳೊಂದಿಗೆ ಸಂಸಾರ ಮಾಡಿ ಈಗ ನಾಪತ್ತೆಯಾಗಿದ್ದಾನೆ. ರಕ್ಷಿತಾ ಪ್ರತಿದಿನ ಅವನನ್ನು ಹುಡುಕಿಕೊಂಡು ತಿರಗಾಡುತ್ತಿದ್ದಾರೆ ಮತ್ತು ನ್ಯಾಯ ಕೊಡಿಸಿ ಅನ್ನುತ್ತಿದ್ದಾರೆ.
ಇದನ್ನೂ ಓದಿ: ಎರಡು ಮಕ್ಕಳ ಮಹಿಳೆ-ಯುವಕನ ಲವ್ವಿಡವ್ವಿ ಗುಟ್ಟು ರಟ್ಟು: ಪ್ರೇಮ್ ಕಹಾನಿ ಸಾವಿನಲ್ಲಿ ಅಂತ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ

ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್

ಪ್ರಿಯಾಂಕ್ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ

‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
