AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಮಕ್ಕಳ ಮಹಿಳೆ-ಯುವಕನ ಲವ್ವಿಡವ್ವಿ ಗುಟ್ಟು ರಟ್ಟು: ಪ್ರೇಮ್ ಕಹಾನಿ ಸಾವಿನಲ್ಲಿ ಅಂತ್ಯ

ಮಹಿಳೆಗೆ ಮದುವೆಯಾಗಿ ಎರಡು ಮಕ್ಕಳ ಇವೆ. ಆದ್ರೆ, ಗಂಡನಿಂದ ದೂರವಾಗಿ ತವರು ಮನೆ ಸೇರಿದ್ದ ಮಹಿಳೆ ಟೈಲ್ಸ್ ಕೆಲಸ ಮಾಡುವ ಯುವಕನ ಲವ್​ ಬಲೆಗೆ ಬಿದ್ದಿದ್ದಳು. ಹೀಗೆ ಒಂದು ದಿನ ಇಬ್ಬರು ಮನೆಯಲ್ಲಿ ಇರುವಾಗ ತಂಗಿ ಕೈಗೆ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಬಳಿಕ ತಮ್ಮ ಅನೈತಿಕ ಸಂಬಂಧ ಗುಟ್ಟು ರಟ್ಟಾಯ್ತು ಎನ್ನುವ ಭಯಕ್ಕೆ ಇಬ್ಬರೂ ಒಟ್ಟಿಗೆ ಪ್ರಾಣ ಕಳೆದುಕೊಂಡಿದ್ದಾರೆ.ಯುವಕ-ಆಂಟಿಯ ಪ್ರೇಮ್ ಕಹಾನಿ ಸಾವಿನಲ್ಲಿ ಅಂತ್ಯವಾಗಿದೆ.

ಎರಡು ಮಕ್ಕಳ ಮಹಿಳೆ-ಯುವಕನ ಲವ್ವಿಡವ್ವಿ ಗುಟ್ಟು ರಟ್ಟು: ಪ್ರೇಮ್ ಕಹಾನಿ ಸಾವಿನಲ್ಲಿ ಅಂತ್ಯ
Sujatha And Sachin
Basavaraj Yaraganavi
| Updated By: ರಮೇಶ್ ಬಿ. ಜವಳಗೇರಾ|

Updated on: May 30, 2025 | 6:28 PM

Share

ಶಿವಮೊಗ್ಗ, (ಮೇ 30): ಮದುವೆಯಾಗಿ 14 ವರ್ಷ ಕಳೆದಿದ್ದು ಎರಡೂ ಮಕ್ಕಳು ಸಹ ಇವೆ. ಆದ್ರೆ, ಗಂಡನಿಂದ ದೂರವಾಗಿದ್ದ ಮಹಿಳೆ (Woman) ಯುವಕನೊಂದಿಗೆ ಪ್ರೇಮ್ ಕಹಾನಿಯಲ್ಲಿ ಸಿಲುಕಿ ಇದೀಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೊಂದೆಡೆ ಯುವಕನೂ ಸಹ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಸುಜಾತ (33) ಎಂಬ ಮಹಿಳೆಗೆ 14 ವರ್ಷದ ಹಿಂದೆ ಮದುವೆಯಾಗಿತ್ತು. ಎರಡು ಮಕ್ಕಳು ಸಹ ಇದ್ದವು. ಆದ್ರೆ, ಗಂಡ ದಿಢೀರ್ ನಾಪತ್ತೆಯಾಗಿದ್ದ. ಕಳೆದ ಮೂರು ನಾಲ್ಕು ವರ್ಷದಿಂದ ಸಂಪರ್ಕಕ್ಕೆ ಬಂದಿಲ್ಲ. ಹೀಗಾಗಿ ಬೆಳಗಾವಿಯಲ್ಲಿದ್ದ ಸುಜಾತ ಮೂರು ನಾಲ್ಕು ವರ್ಷದ ಹಿಂದೆ ಶಿವಮೊಗ್ಗದ (Shivamogga) ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ತಮ್ಮಡಿಹಳ್ಳಿಕೊಪ್ಪದಲ್ಲಿರುವ ತವರು ಮನೆಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದಳು.ಈ ವೇಳೆ ಯುವಕನೊಂದಿಗೆ ಲವ್ವಿಡವ್ವಿ ಶುರುವಾಗಿದ್ದು, ಇಬ್ಬರು ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಬಳಿಕ ಭಯಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಂಡ ಬಿಟ್ಟು ಎರಡು ಮೂರು ವರ್ಷವಾದ ಮೇಲೆ ಸುಜಾತಳೊಗೆ ಆಯನೂರು ಕೋಟೆಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಸಚಿನ್ ಎನ್ನುವ ಯುವಕನ ಪರಿಚಯವಾಗಿದೆ. ಬಳಿಕ ಇಬ್ಬರ ಗೆಳೆತನ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಕಳೆದ ಒಂದು ವಾರದಿಂದ ಸಚಿನ್, ಸುಜಾತಳ ಜೊತೆ ಬಂದು ವಾಸವಾಗಿದ್ದ. ಹೀಗಿರುವಾಗ ಶಿಕಾರಿಪುರ ತಾಲೂಕಿನ ಕಲ್ಮನೆಯಲ್ಲಿದ್ದ ಸುಜಾತಳ ಸಹೋದರಿ ಗೀತ, ರಿಪ್ಪನ್ ಪೇಟೆಯ ಮಕ್ಕಳು ಶಾಲೆಗೆ ಸೇರಿಸಲು ಬಂದಿದ್ದಳು. ಆಗ ಇಬ್ಬರು ಮನೆಯಲ್ಲಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಮಂಗಳೂರು: ಬಾವಿಯಲ್ಲಿ ಪ್ರಿಯಕರನ ಜೊತೆ ವಿವಾಹಿತೆಯ ಶವಪತ್ತೆ

ಅಕ್ಕ ಮತ್ತು ಸಚಿನ್ ಸಚಿನ್ ಸಿಕ್ಕಿಬಿದ್ದದ್ದರು. ಇಬ್ಬರಿಗೂ ಸಹೋದರಿ ಗೀತಾ ಬುದ್ದಿವಾದ ಹೇಳಿದ್ದಳು. ಬುದ್ದಿವಾದ ಹೇಳಿ ಸಹೋದರಿ ಇತ್ತ ಬರುತ್ತಿದ್ದಂತೆ ಸುಜಾತ ಮತ್ತು ಸಚಿನ್ ಇಬ್ಬರು ಕಳೆ ನಾಶಕ ಸೇವಿಸಿದ್ದಾರೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನು ಸಚಿನ್ ಸುಜಾತಳಿಗೆ ಬಲವಂತವಾಗಿ ಕುಡಿಸಿ ಸಾಯಿಸಿರುವುದಾಗಿ ಸುಜಾತಳ ಕುಟುಂಬಸ್ಥರ ಆರೋಪವಾಗಿದೆ.

ಲವ್ವಿಡವ್ವಿ ಗೊತ್ತಾದ ಭಯಕ್ಕೆ ಆತ್ಮಹತ್ಯೆ

ಬುದ್ದಿವಾದ ಹೇಳಿದ್ದು ಒಂದಡೆಯಾದ್ರೆ ಎರಡು ಮಕ್ಕಳ ತಾಯಿ ಯುವಕನ ಜೊತೆ ಎರಡು ವರ್ಷದಿಂದ ಲವ್ ಮಾಡುತ್ತಿರುವ ವಿಷಯ ಬಹಿರಂಗವಾಗಿತ್ತು. ಈ ನಡುವೆ ಯುವಕನಿಗೆ ಮತ್ತು ಸುಜಾತಾಗೆ ಆತಂಕ ಭಯ ಶುರುವಾಗಿತ್ತು. ಈ ವಿಚಾರವು ಎಲ್ಲಿ ಎಲ್ಲರಿಗೂ ಗೊತ್ತಾಗುತ್ತದೆ. ತಮ್ಮಿಬ್ಬರ ಅನೈತಿಕ ಸಂಬಂಧಕ್ಕೆ ಬ್ರೇಕ್ ಬೀಳುತ್ತದೆ ಎನ್ನುವ ಆತಂಕ ಅವರಿಗೆ ಕಾಡಲು ಶುರುವಾಗಿತ್ತು. ಇದರಿಂದ ಇಬ್ಬರು ಒಟ್ಟಿಗೆ ಸಾಯುವ ನಿರ್ಧಾರ ಮಾಡಿ ಕೊನೆಗೆ ಒಟ್ಟಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಶಿವಮೊಗ್ಗದ ಜಿಲ್ಲಾಸ್ಪತ್ರೆ ಮೆಗ್ಗಾನ್ ಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ (ಮೇ 29) ತಡರಾತ್ರಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ರಿಪ್ಪನಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರ ಸಾವಿನ ಪ್ರಕರಣ ದಾಖಲು ಆಗಿದೆ.

ಚಿಕ್ಕ ವಯಸ್ಸಿನಲ್ಲೇ ಮಗನ ಸಾವು ನೋಡಿದ ತಂದೆ ಮತ್ತು ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ. ಸಚಿನ್ ಮನೆಯಿಂದ ಕೆಲಸಕ್ಕೆ ಹೋಗಿ ಒಂದು ವಾರ ಆದ್ರೂ ವಾಪಸ್ ಮನೆಗೆ ಬಂದಿರಲಿಲ್ಲ. ಮಗ ಟೈಲ್ಸ್ ಕೆಲಸಕ್ಕೆ ಹೋಗಿದ್ದಾನೆಂದು ಸಚಿನ್ ತಂದೆ ಅಂದುಕೊಂಡಿದ್ದರು. ಆದ್ರೆ ಈತ ಒಂದು ವಾರದಿಂದ ಸುಜಾತ ಜೊತೆ ವಾಸವಾಗಿರುವುದು ಗೊತ್ತೇ ಇರಲಿಲ್ಲ.

ಮಹಿಳೆ ಮತ್ತು ಯುವಕನ ನಡುವೆ ಇದ್ದ ಅನೈತಿಕ ಸಂಬಂಧವು ಇಬ್ಬರ ಜೀವ ಬಲಿ ಪಡೆದಿದೆ. ಅಂಟಿಯನ್ನು ಲವ್ ಮಾಡಿ ಯುವಕನು ಚಿಕ್ಕ ವಯಸ್ಸಿನಲ್ಲೇ ತನ್ನ ಜೀವನ ಕಳೆದುಕೊಂಡಿದ್ದಾನೆ. ಅತ್ತ ಸುಜಾತಾ ಎರಡು ಮಕ್ಕಳನ್ನು ಅನಾಥ ಮಾಡಿದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.