Karnataka Transport Strike: ಬೆಳಗಾವಿಯಲ್ಲಿ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಸುತ್ತಿರುವ ಪೊಲೀಸ್ ಕಮೀಷನರ್
ಕೆಎಸ್ಆರ್ಟಿಸಿ ಬೆಳಗಾವಿ ವಿಭಾಗದ ಡ್ರೈವರ್ ಮತ್ತು ಕಂಡಕ್ಟರ್ ಸ್ವಯಂಪ್ರೇರಿತರಾಗಿ ಬಸ್ಗಳನ್ನು ಓಡಿಸಲು ಮುಂದಾದರೆ ಸಿಬ್ಬಂದಿ ಮತ್ತು ವಾಹನಗಳಿಗೆ ಬೆಳಗಾವಿ ನಗರ ವ್ಯಾಪ್ತಿಯವರೆಗೆ ಭದ್ರತೆಯನ್ನು ಕಲ್ಪಿಸಲಾಗುವುದು ಎಂದು ಪೊಲೀಸ್ ಕಮೀಷನರ್ ಹೇಳಿದರು. ಪೊಲೀಸ್ ಎಸ್ಕಾರ್ಟ್ ಒದಗಿಸಲಾಗುತ್ತಿದೆ ಮತ್ತು ಯಾರಾದರೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗಳಿಗೆ ಹಾನಿಯನ್ನುಂಟು ಮಾಡಿದರೆ ಕಾನೂನು ರೀತ್ಯಾ ಕ್ರಮ ಜರುಗಿಸುತ್ತೇವೆ ಎಂದು ಬೊರಸೆ ಹೇಳಿದರು.
ಬೆಳಗಾವಿ, ಆಗಸ್ಟ್ 5: ಹೈಕೋರ್ಟ್ ಆದೇಶದ ಹೊರತಾಗಿಯೂ ಕೆಎಸ್ಆರ್ಟಿಸಿ ನೌಕರರು ಮಧ್ಯರಾತ್ರಿಯಿಂದಲೇ ಮುಷ್ಕರ ಆರಂಭಿಸಿದ್ದಾರೆ. ಬೆಳಗಾವಿಯಲ್ಲಿ ಮುಷ್ಕರದ ಪ್ರಭಾವ ನಿಚ್ಚಳವಾಗಿ ಕಾಣುತ್ತಿದೆ. ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಜನ ಬಸ್ಗಳಿಲ್ಲದೆ ಪರದಾಡುತ್ತಿದ್ದಾರೆ. ಬೆಳಗಾವಿ ವಿಭಾಗದ ಪೊಲೀಸ್ ಕಮೀಷನರ್ ಭೂಷನ್ ಗುಲಾಬರಾವ್ ಬೊರಸೆ ಮತ್ತು ಮತ್ತು ಡಿಸಿಪಿ ನಾರಾಯಣ ಬರ್ಮನಿ (Narayana Barmani) ಅವರು ತಮ್ಮ ಸಿಬ್ಬಂದಿಯೊಂದಿಗೆ ಕೇಂದ್ರೀಯ ಬಸ್ ನಿಲ್ದಾಣದಲ್ಲಿರುವ ಜನರನ್ನು ಖಾಸಗಿ ಬಸ್ಸು ಮತ್ತು ವಾಹನಗಳ ಮೂಲಕ ಅವರವರ ಊರುಗಳಿಗೆ ಕಳಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಕಮೀಷನರ್ ಬೆಳಗ್ಗೆ 5.30 ರಿಂದಲೇ ಜಿಲ್ಲೆಯಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ ಎಂದರು.
ಇದನ್ನೂ ಓದಿ: KSRTC, BMTC Employees Strike: ಆಗಸ್ಟ್ 5 ರಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

