ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ

Edited By:

Updated on: May 06, 2025 | 8:45 PM

ಗಾಯಕ ಸೋನು ನಿಗಮ್​ ಅವರಿಗೆ ಆತ್ಮೀಯರಾದ ಮನೋಮೂರ್ತಿ ಅವರೇ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆದರೂ ಸೋನು ನಿಗಮ್ ಅವರ ಹಾಡನ್ನು ತೆಗೆದುಹಾಕಲಾಗಿದೆ. ಆ ಬಗ್ಗೆ ನಿರ್ಮಾಪಕ ಸಂತೋಷ್ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸೋನು ನಿಗಮ್ ಸರಿಯಾಗಿ ಕ್ಷಮೆ ಕೇಳಿಲ್ಲ’ ಎಂದು ಸಂತೋಷ್ ಹೇಳಿದ್ದಾರೆ.

ಸೋನು ನಿಗಮ್ ಅವರು ‘ಕುಲದಲ್ಲಿ ಕೀಳ್ಯಾವುದೋ’ (Kuladalli Keelyavudo) ಸಿನಿಮಾದಲ್ಲಿ ಒಂದು ಹಾಡಿಗೆ ಧ್ವನಿ ನೀಡಿದ್ದರು. ಆದರೆ ಕನ್ನಡಿಗರ ಬಗ್ಗೆ ಅವರು ತಪ್ಪಾಗಿ ಮಾತನಾಡಿದ್ದರಿಂದ ಸೋನು ನಿಗಮ್ (Sonu Nigam) ಅವರ ಹಾಡನ್ನು ಚಿತ್ರದಿಂದ ತೆಗೆದು ಹಾಕಲು ನಿರ್ಮಾಪಕ ಸಂತೋಷ್ ನಿರ್ಧರಿಸಿದ್ದಾರೆ. ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕ ಚೇತನ್ ಸೋಸ್ಕಾ ಅವರಿಗೆ ಅವಕಾಶ ನೀಡಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಆ ಬಗ್ಗೆ ಅವರು ಮಾತನಾಡಿದ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.