ಅದ್ಯಾವ ಮುಖ ಇಟ್ಕೊಂಡು ಕುಮಾರಸ್ವಾಮಿ ಮುಸ್ಲಿಂ ವೋಟು ಕೇಳುತ್ತಾರೆ? ಜಮೀರ್ ಅಹ್ಮದ್

|

Updated on: Nov 01, 2024 | 2:39 PM

ನಿಖಿಲ್ ಕುಮಾರಸ್ವಾಮಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಮೀರ್, ಅವರ ಬಗ್ಗೆ ಕಾಮೆಂಟ್ ಮಾಡಲ್ಲ, ತನ್ನ ಮಗ ಮತ್ತು ನಿಖಿಲ್ ಇಬ್ಬರೂ ತನಗೆ ಒಂದೇ, ಅವರು ಈಗಲೂ ತನ್ನನ್ನು ಅಂಕಲ್ ಎಂದು ಕರೆಯುತ್ತಾರೆ ಎಂದರು. ಜೆಡಿಎಸ್ ಜೊತೆ ಬಾಂಧವ್ಯ ಕಡಿದುಕೊಂಡರೂ ಚಿಕ್ಕಂದಿನಿಂದ ನೋಡುತ್ತಾ ಬಂದಿರುವ ನಿಖಿಲ್ ಬಗ್ಗೆ ಜಮೀರ್ ಮಮತೆ ಇಟ್ಟಕೊಂಡಿರುವುದು ಅಭಿನಂದನೀಯ.

ಬಳ್ಳಾರಿ: ತಮ್ಮ ಅತಿರೇಕದ ಹೇಳಿಕೆಗಳಿಂದ ವಿವಾದಗಳನ್ನು ಸೃಷ್ಟಿಸುವ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಬಳ್ಳಾರಿಯಲ್ಲಿ ಮಾತಾಡಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಮುಸ್ಲಿಂ ಮತದಾರರ ಬಳಿ ಹೋಗಿ ವೋಟು ಕೇಳುವ ನೈತಿಕತೆ ಇಲ್ಲ, ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ತನಗೆ ಮುಸ್ಲಿಂ ವೋಟುಗಳೇ ಬೇಡ, ಅವರು ತನ್ನ ಪಕ್ಕದಲ್ಲಿ ಬಂದು ನಿಲ್ಲೋದು ಸಹ ಬೇಕಿಲ್ಲ ಎನ್ನುತ್ತಾರೆ, ಅವರ ಮಾತನ್ನು ಸಿಟಿ ರವಿ, ಬಿವೈ ವಿಜಯೇಂದ್ರ ಪುನರುಚ್ಛರಿಸುತ್ತಾರೆ, ನಮಗೆ ಮುಸ್ಲಿಂ ವೋಟುಗಳು ಬೇಕೆಂದು ಕುಮಾರಸ್ವಾಮಿ ಬಿಜೆಪಿ ನಾಯಕರಿಂದ ಹೇಳಿಸಲಿ ನೋಡೋಣ ಎಂದು ಸವಾಲೆಸೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಲುಕೆರೆದು ಜಗಳಕ್ಕೆ ಹೋಗುವ ಪ್ರವೃತ್ತಿ ಪ್ರದರ್ಶಿಸಿದ ಸಚಿವ ಜಮೀರ್ ಅಹ್ಮದ್