ಕುಮಾರಸ್ವಾಮಿಯವರಿಗೆ ಒಂದೆರಡಲ್ಲ, ಮೂರು-ಮೂರು ಕಡೆ ಗಂಡಸ್ತನ ತೋರಿಸುವುದು ಗೊತ್ತು: ಕೆ ಎಸ್ ಈಶ್ವರಪ್ಪ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 31, 2022 | 6:30 PM

ಮುಖ್ಯಮಂತ್ರಿಯಾಗಿದ್ದವರಿಗೆ ಹೀಗೆ ಮಾತಾಡುವುದು ಶೋಭೆ ತರುವುದಿಲ್ಲ. ಅವರಾಡಿದ ಮಾತುಗಳನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದ ಈಶ್ವರಪ್ಪನವರು, ಕುಮಾರಸ್ವಾಮಿಯವರ ಪದಬಳಕೆ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ ಅಂತ ಹೇಳಿದರು.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಅವರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಗಂಡಸ್ತನವಿದ್ದರೆ ಹಲಾಲ್ ಕಟ್ ಮಾಂಸ ಮಾರಾಟ ಮತ್ತು ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆ ಮತ್ತು ಹಿಂದೂ ದೇವಾಲಯಗಳ ಆವರಣದಲ್ಲಿ ನಿಷೇಧ ಹೇರಿರುವುದನ್ನು ತಡೆಯಲಿ ಎಂದು ಸವಾಲು ಹಾಕಿ ಪರಿತಪಿಸುವಂತಾಗಿದೆ. ಬಿಜೆಪಿ ನಾಯಕರೆಲ್ಲ ಅವರನ್ನು ಒಂದೇ ಸಮ ಟೀಕಿಸುತ್ತಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಹಿರಿಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ ಎಸ್ ಈಶ್ವರಪ್ಪನವರು (KS Eshwarappa) ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಾಡುತ್ತಾ ಕುಮಾರಸ್ವಾಮಿ ಬಳಸಿದ ಪದವನ್ನು ಕಟುವಾಗಿ ಟೀಕಿಸಿದರು.

ಗಂಡಸ್ತನವನ್ನು ಯಾವುದಕ್ಕೆ ಬಳಸಬೇಕು ಅನ್ನೋದು ಕುಮಾರಸ್ವಾಮಿಯವರಿಗೆ ಚೆನ್ನಾಗಿ ಗೊತ್ತಿದೆ. ಒಂದಲ್ಲ, ಎರಡಲ್ಲ ಮೂರುಕಡೆ ಗಂಡಸ್ತನ ಬಳಸುವುದು ಅವರಿಗೆ ಚೆನ್ನಾಗಿ ಗೊತ್ತು. ಆದರೆ, ಗಂಡಸ್ತನವನ್ನು ಎಲ್ಲ ಕಡೆ ಬಳಸುವ ಬಗ್ಗೆ ಯೋಚನೆ ಮಾಡಬಾರದು. ಅವರೊಬ್ಬ ಪ್ರಬುಧ್ಧ ಮತ್ತು ಹಿರಿಯ ರಾಜಕಾರಣಿ ಅಗಿದ್ದಾರೆ. ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದ ಅವರು ಇನ್ನೊಬ್ಬ ಮುಖ್ಯಮಂತ್ರಿಯನ್ನು ಉದ್ದೇಶಿಸಿ ಗಂಡಸ್ತನದಂಥ ಪದಬಳಕೆ ಮಾಡಬಾರದು ಎಂದು ಈಶ್ವರಪ್ಪ ಹೇಳಿದರು.

ಮುಖ್ಯಮಂತ್ರಿಯಾಗಿದ್ದವರಿಗೆ ಹೀಗೆ ಮಾತಾಡುವುದು ಶೋಭೆ ತರುವುದಿಲ್ಲ. ಅವರಾಡಿದ ಮಾತುಗಳನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದ ಈಶ್ವರಪ್ಪನವರು, ಕುಮಾರಸ್ವಾಮಿಯವರ ಪದಬಳಕೆ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ ಅಂತ ಹೇಳಿದರು.

ಇದನ್ನೂ ಓದಿ:  ಕುಮಾರಸ್ವಾಮಿಯವರ ಹಾಗೆ ನಾವು ಗಂಡಸ್ತನ ತೋರಲು ಸಾಧ್ಯವಿಲ್ಲ, ಅವರ ಗಂಡಸ್ತನದ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ: ಸಿಟಿ ರವಿ

Published on: Mar 31, 2022 06:30 PM