ದೊಡ್ಡಬಳ್ಳಾಪುರ: ರಾಹುಲ್ ಗಾಂಧಿ ಸ್ವಾಗತಕ್ಕೆ ಕಾಂಗ್ರೆಸ್ ನಾಯಕರು (Congress leader) ಬೃಹತ್ ಹೂವಿನ ಹಾರ ತರಿಸಿದ್ದಾರೆ. ಕೇಸರಿ, ಬಿಳಿ, ಹಸಿರು ಬಣ್ಣದ ಹೂವಿನ ಹಾರ ಹಾಕಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಸ್ವಾಗತಿಸಲು ದೊಡ್ಡಬಳ್ಳಾಪುರದ ಟಿ.ಬಿ ಕ್ರಾಸ್ ಬಳಿ ಸಿದ್ದತೆ ಮಾಡಿಕೊಳ್ಳಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಹೂವಿನ ಹಾರ ಇದಾಗಿದ್ದು, 50 ಅಡಿ ಉದ್ದದ್ದಾಗಿದೆ. ಹೂವಿನ ಹಾರವನ್ನು ಕನಕಾಂಬರ, ಸುಗಂಧರಾಜ ಹಾಗೂ ಪತ್ರೆಯಿಂದ ತಯಾರಿಸಲಾಗಿದೆ. ಸ್ಥಳಿಯ ಶಾಸಕ ವೆಂಕಟರಮಣಯ್ಯ ನೇತೃತ್ವದಲ್ಲಿ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ರೇನ್ ಮೂಲಕ ಹೂವಿನ ಹಾರ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ರಾಹುಲ್ ಗಾಂಧಿ ಜೊತೆ ಸೇಲ್ಪಿ ಪೋಟೋ ತೆಗೆದುಕೊಳ್ಳಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತ
ರಾಹುಲ್ ಗಾಂಧಿ ಜೊತೆ ಸೇಲ್ಪಿ ಪೋಟೋ ತೆಗೆದುಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಕಾರ್ಯಕರ್ತನನ್ನು ತಡೆದು ಹಿಂದೆ ತಳ್ಳಿದರು. ಇದನ್ನು ಗಮನಿಸಿದ ರಾಹುಲ್ ಗಾಂಧಿ ಕಾರಿನಿಂದ ಕೆಳಗೆ ಇಳಿದು ಸೇಲ್ಪಿಗೆ ಪೋಸ್ ನೀಡಿದ್ದಾರೆ.
ಇದನ್ನೂ ಓದಿ:
ಜಿ-23 ಸಭೆಯ ನಂತರ ಕಾಂಗ್ರೆಸ್ನ ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡಾ ಭೇಟಿ ಮಾಡಿದ ರಾಹುಲ್ ಗಾಂಧಿ