ಕುಮಾರಸ್ವಾಮಿಯವರ ಹಾಗೆ ನಾವು ಗಂಡಸ್ತನ ತೋರಲು ಸಾಧ್ಯವಿಲ್ಲ, ಅವರ ಗಂಡಸ್ತನದ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ: ಸಿಟಿ ರವಿ

ಹಲಾಲ್ ಮತೀಯ ಕೇಂದ್ರಿತ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ, ಹಾಗಾಗೇ ನಾನು ಇದನ್ನು ಎಕಾನಾಮಿಕ್ ಜಿಹಾದ್ ಅಂತ ಹೇಳಿದ್ದು. ಇದು ಗುಣಮಟ್ಟವನ್ನು ಸೂಚಿಸುತ್ತದೆ ಅಂತಾದ್ರೆ ಅದನ್ನು ಸರ್ಟಿಫೈ ಮಾಡಿದವರು ಯಾರು? ಎಂದು ರವಿ ಕೇಳಿದರು.

ಕುಮಾರಸ್ವಾಮಿಯವರ ಹಾಗೆ ನಾವು ಗಂಡಸ್ತನ ತೋರಲು ಸಾಧ್ಯವಿಲ್ಲ, ಅವರ ಗಂಡಸ್ತನದ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ: ಸಿಟಿ ರವಿ
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 31, 2022 | 5:26 PM

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಗಂಡಸ್ತನವಿದ್ದರೆ ಹಲಾಲ್ ಕಟ್ (halal cut) ಮಾಂಸ ಮತ್ತು ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿರುವುದನ್ನು ತಡೆಯಲಿ ಎಂದು ಸವಾಲು ಹಾಕಿರುವುದು ವಿವಾದಕ್ಕೀಡಾಗಿದೆ. ಅವರು ಬಳಸಿದ ಗಂಡಸ್ತನ (machismo) ಪದವನ್ನು ಬಿಜೆಪಿ ನಾಯಕರು ಕಟುವಾಗಿ ಟೀಕಿಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಟಿವಿ9 ಕನ್ನಡ ಚ್ಯಾನೆಲ್ ನ ಬೆಂಗಳೂರು ವರದಿಗಾರ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಅವರೊಂದಿಗೆ ಮಾತಾಡಿದರು. ಕುಮಾರಸ್ವಾಮಿ ಅವರಿಗಿಂತ ದೊಡ್ಡ ಗಂಡಸು ಬೇರೆ ಯಾರೂ ಇಲ್ಲ, ಅವರ ಗಂಡಸುತನದ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ ಎಲ್ಲರೂ ಕುಮಾರಸ್ವಾಮಿ ಅವರ ಥರ ಗಂಡಸ್ತನ ತೋರಿಸುವುದಕ್ಕೆ ಖಂಡಿತ ಸಾಧ್ಯವಿಲ್ಲ ಎಂದು ರವಿ ಹೇಳಿದರು.

ಹಲಾಲ್ ವಿಷಯಕ್ಕೆ ಸಂಬಂಧಿಸಿದಂತೆ ಮಾತಾಡಿದ ರವಿ ಅವರು ಹಲಾಲ್ ಅಂದರೇನು, ಅದು ಗುಣಮಟ್ಟ ತೋರುತ್ತದೆಯೇ? ಏನನ್ನು ಸೂಚಿಸುವ ಮುದ್ರೆ ಅದು? ಹಲಾಲ್ ಮುದ್ರೆಯೊಂದಿಗೆ ವ್ಯಾಪಾರ ಮಾಡುವವರು ಅದನ್ನು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತಾರೆ ಮತ್ತು ತಾವು ಸೆಕ್ಯುಲರ್ ಅಂತ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತಾರೆ? ಎಂದು ರವಿ ಕೇಳಿದರು. ಐ ಎಸ್ ಐ ಮುದ್ರೆ ಗುಣಮಟ್ಟದ ಸಂಕೇತ ಎಲ್ಲರಿಗೂ ಗೊತ್ತು, ಹಲಾಲ್ ಕೂಡ ಗುಣಮಟ್ಟವನ್ನು ದರ್ಶಿಸುತ್ತದೆಯೇ? ಎಂದು ರವಿ ಕೇಳಿದರು.

ತನ್ನ ವ್ಯಾಪಾರವನ್ನು ಬೇರೆಯವರು ಅತಿಕ್ರಮಿಸಿಕೊಳ್ಳಬಾರದು ಎಂಬ ಉದ್ದೇಶದೊಂದಿಗೆ ಮಾಡಿಕೊಂಡಿರುವ ಹುನ್ನಾರವಿದು. ಇದು ಮತೀಯ ಕೇಂದ್ರಿತ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ, ಹಾಗಾಗೇ ನಾನು ಇದನ್ನು ಎಕಾನಾಮಿಕ್ ಜಿಹಾದ್ ಅಂತ ಹೇಳಿದ್ದು. ಇದು ಗುಣಮಟ್ಟವನ್ನು ಸೂಚಿಸುತ್ತದೆ ಅಂತಾದ್ರೆ ಅದನ್ನು ಸರ್ಟಿಫೈ ಮಾಡಿದವರು ಯಾರು? ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಇಲ್ಲವೇ ಹೆಚ್ ಡಿ ದೇವೇಗೌಡ ಅವರು ಸಿ ಎಮ್ ಅಥವಾ ಪ್ರಧಾನ ಮಂತ್ರಿಯಾಗಿದ್ದಾಗ ಅದನ್ನು ಜಾರಿಗೆ ತಂದಿದ್ದರೆ? ಎಂದು ರವಿ ಕೇಳಿದರು.

ಸತ್ಯ ಹೇಳುವವನನ್ನು ಕಟಕಟೆಯಲ್ಲಿ ನಿಲ್ಲಿಸಬಾರದು. ಯಾವುದೇ ವಿಷಯವನ್ನು ಪ್ರಸ್ತಾಪಿಸುವಾಗ ವಿವೇಚನೆ ಇರಬೇಕು ಎಂದು ಅವರು ಹೇಳಿದರು.

ಕೇಸರಿ ತೊಟ್ಟವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಮಾಡಿರುವ ಆರೋಪವನ್ನು ಸಾರಾಸಗಟು ತಳ್ಳಿ ಹಾಕಿದ ರವಿ ಅವರು, ಕೇಸರಿ ತೊಟ್ಟವರು ಯಾವತ್ತೂ ಸಮಾಜ ಒಡಯುವ ಕೆಲಸ ಮಾಡಿಲ್ಲ ಮುಂದೆಯೂ ಮಾಡಲ್ಲ ಎಂದರು.

ಕೇಸರಿ ತೊಟ್ಟವರು ದೇಶಕ್ಕಾಗಿ ಜೀವ ಕೊಡುವವರು, ಕೇಸರಿ ಶೌರ್ಯ ಮತ್ತು ತ್ಯಾಗದ ಸಂಕೇತವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:  ಗಂಡಸ್ತನ ಯಾವುದಕ್ಕೆ ಬಳಸಬೇಕೆಂದು ಹೆಚ್‌ಡಿ ಕುಮಾರಸ್ವಾಮಿಗೆ ಗೊತ್ತು; ಹೆಚ್ಡಿಕೆ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವ ಈಶ್ವರಪ್ಪ

Follow us