ಕುಮಾರಸ್ವಾಮಿ ಜಮೀನು ಒತ್ತುವರಿ ಪ್ರಕರಣ, ಕೋರ್ಟ್ ಆದೇಶವನ್ನು ಪಾಲಿಸುತ್ತಿದ್ದೇವೆ ಎಂದ ರಾಮನಗರ ಜಿಲ್ಲಾಧಿಕಾರಿ

Updated on: Mar 18, 2025 | 2:00 PM

ಕೇಂದ್ರ ಸಚಿವರೊಬ್ಬ ವಿರುದ್ಧ ಜಮೀನು ಒತ್ತುವರಿ ಕಾರ್ಯಾಚರಣೆ ನಡೆದ ನಿದರ್ಶನಗಳು ಬಹಳ ಅಪರೂಪ. ಕಂದಾಯ ಇಲಾಖೆ ನಡೆಸಿರುವ ಸರ್ವೇಗಳ ಪ್ರಕಾರ ಕೇತಗಾನಹಳ್ಳಿಯ ಸರ್ವೆ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ ಒತ್ತುವರಿ ಮಾಡಿಕೊಳ್ಳುವ ಕೆಲಸ ನಡೆದಿದೆ ಮತ್ತು ವಿಷಯ ಗೊತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೆ ಸುಮ್ಮನಿದ್ದ ಕಾರಣ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ರಾಮನಗರ, 18 ಮಾರ್ಚ್: ಜಿಲ್ಲೆಯ ಬಿಡದಿ ಹೋಬಳಿಯಲ್ಲಿರುವ ಕೇತಗಾನಹಳ್ಳಿಯಲ್ಲಿ (Kethaganahalli) ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಜಮೀನಿನ ತೆರವು ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಶುರುಮಾಡಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ರಾಜ್ಯದ ಉಚ್ಚ ನ್ಯಾಯಾಲಯದ ಆದೇಶದಂತೆ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ, ಹತ್ತಕ್ಕೂ ಹೆಚ್ಚು ಸರ್ವೆ ನಂಬರ್​ಳಲ್ಲಿ ಒತ್ತುವರಿಯಾಗಿದೆ ಎಂದು ಹೇಳಿದರು. ಕುಮಾರಸ್ವಾಮಿ ಅವರಿಂದ ಮಾತ್ರ ಒತ್ತುವರಿ ಅಗಿದೆಯಾ ಅಥವಾ ಬೇರರೆಯವರು ಸಹ ಮಾಡಿದ್ದಾರಾ ಅಂತ ಕೇಳಿದ್ದಕ್ಕೆ ಡಿಸಿ ಉತ್ತರ ನೀಡಲಿಲ್ಲ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕಾನೂನು ಬಾಹಿರವಾಗಿ ಭೂಮಿ ಇದ್ರೆ ವಶಪಡಿಸಿಕೊಳ್ಳಿ, ಹಾಗೇ ನನ್ನ ಜಮೀನು ಹುಡುಕಿಕೊಡಿ: ಸರ್ಕಾರಕ್ಕೆ ಕುಮಾರಸ್ವಾಮಿ ಪತ್ರ