ಆಪರೇಶನ್ ಕಮಲದಿಂದಲೇ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಬಿದ್ದಿತ್ತು: ಚಲುವರಾಯಸ್ವಾಮಿ

|

Updated on: Nov 18, 2024 | 3:12 PM

ಹಗರಣಗಳಿಂದ ಸರ್ಕಾರ ಉರುಳಲ್ಲ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಹಳಷ್ಟು ಹಗರಣಗಳು ನಡೆದರೂ ಅವರು ಅವಧಿ ಪೂರೈಸಿದರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆಯೇ ಹೊರತು ಯಾವುದನ್ನೂ ಸಾಬೀತು ಮಾಡಿಲ್ಲ, ಹಾಗಾಗಿ ಸರ್ಕಾರ ಉರುಳುವ ಚಾನ್ಸೇ ಇಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಎನ್ ಚಲುವರಾಯಸ್ವಾಮಿ ಆಪರೇಶನ್ ಕಮಲದ ಬಗ್ಗೆ ಮಾತು ಕೇಳಿಬರುತ್ತಿರೋದು ಮೊದಲ ಸಲವಲ್ಲ, ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಬಿಎಸ್ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿಸಲಾಗಿತ್ತು, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪದೇಪದೆ ಸರ್ಕಾರ ಬೀಳುತ್ತೆ ಅನ್ನುತ್ತಿದ್ದಾರೆ, ಆಪರೇಶನ್ ಕಮಲ ನಡೆಯುತ್ತಿದೆ ಅನ್ನೋದಿಕ್ಕೆ ಮತ್ತೇನು ಸಾಕ್ಷಿ ಬೇಕು? ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಾರು ಕೊಚ್ಚೆ, ಕಚಡಾ ಎಂದು ಚರ್ಚೆ ಮಾಡೋಣ; ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಪಂಥಾಹ್ವಾನ