ತಮ್ಮ ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇದ್ದಂತಿಲ್ಲ: ಎನ್ ಚಲುವರಾಯಸ್ವಾಮಿ

|

Updated on: Jul 06, 2024 | 9:03 PM

ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಯಾವುದೇ ಅಹವಾಲು ಸಲ್ಲಿಸಿದರೂ ಅದನ್ನು ಥ್ರೂ ಪ್ರಾಪರ್ ಚ್ಯಾನಲ್ ಕಳಿಸಿ ಎಂಬ ಉತ್ತರ ಸಿಗುತ್ತದೆ. ಈ ಹಿನ್ನೆಲೆಯಲ್ಲೇ ಕುಮಾರಸ್ವಾಮಿಯವರು ತಮ್ಮ ವಿಶೇಷ ಅಧಿಕಾರ ಬಳಿಸಿ ಕರ್ನಾಟಕ ಸರ್ಕಾರದ ಮನವಿಗಳು ಕೇಂದ್ರದ ಗಮನಕ್ಕೆ ತಂದು ಅವುಗಳಿಗೆ ಸೂಕ್ತ ಪರಿಹಾರ ಕೊಡಿಸುವ ಕೆಲಸ ಮಾಡಲಿ ಎಂದು ಚಲುವರಾಯಸ್ವಾಮಿ ಹೇಳಿದರು.

ಬೆಂಗಳೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತನ್ನ ಬಗ್ಗೆ ಕಾಮೆಂಟ್ ಮಾಡಿದರೆ ಎನ್ ಚಲುವರಾಯಸ್ವಾಮಿ ಸುಮ್ಮನಿದ್ದಾರೆಯೇ? ನಗರದಲ್ಲಿಂದು ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಕೃಷಿ ಸಚಿವ, ತಾನು ಯಾರಿಂದಲೂ ಸರ್ಟಿಫಿಕೇಟ್ ಕೇಳಿಲ್ಲ, ಕುಮಾರಸ್ವಾಮಿಗೆ ಸರ್ಟಿಫಿಕೇಟ್ ನೀಡುವ ಪ್ರಯತ್ನವೇನೂ ಮಾಡುತ್ತಿಲ್ಲ, ಮಂತ್ರಿ-ಶಾಸಕರಿಗೆ ಸರ್ಟಿಫಿಕೇಟ್ ಕೊಡಬೇಕಿರುವುದು ಜನ ಎಂದು ಹೇಳಿದರು. ಕುಮಾರಸ್ವಾಮಿಯವರಿಗೆ ಒಬ್ಬ ಕೇಂದ್ರ ಸಚಿವನ ವ್ಯಾಪ್ತಿ ಮತ್ತು ಜವಾಬ್ದಾರಿ, ಶಾಸಕನ ವ್ಯಾಪ್ತಿ, ರಾಜ್ಯ ಸರ್ಕಾರದ ಮಂತ್ರಿಯ ವ್ಯಾಪ್ತಿ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ಇದ್ದಂತಿಲ್ಲ, ಯಾವುದಾದರೂ ಒಬ್ಬ ಸೀನಿಯರ್ ಅಧಿಕಾರಿಯ ಹತ್ತಿರ ಕೇಳಿ ತಿಳಿದುಕೊಂಡು, ಅಧ್ಯಯನ ಮಾಡಲಿ ಎಂದು ಛೇಡಿಸಿದರು. ಸಾರ್ವಜನಿಕ ಕೆಲಸಗಳು ಎಷ್ಟೇ ಮಾಡಿದರೂ ಅವು ಮುಗಿಯಲ್ಲ, ಇವತ್ತು ಮಂಡ್ಯದ ಶಾಸಕ ರವಿಯವರು ಕೆರಗೋಡುನಲ್ಲಿ ಜನ ಸಂಪರ್ಕ ಸಭೆ ಮಾಡಿದ್ದು 3,200 ಅರ್ಜಿಗಳು ಬಂದಿವೆಯಂತೆ. ತಾನು ಕುಮಾರಸ್ವಾಮಿಯವರಿಗೆ ತಿಳಿಸಲಿಚ್ಛಿಸುವ ವಿಷಯವೇನೆಂದರೆ ಸಂಪುಟ ರಚನೆಯಾದ ಒಂದು ವರ್ಷದ ಅವಧಿಯಲ್ಲಿ ಸುಮಾರು 10,000 ಅರ್ಜಿಗಳನ್ನು ಇತ್ಯರ್ಥ ಮಾಡಿದ್ದೇವೆ ಮತ್ತು ಸುಮಾರು 1,300 ಅರ್ಜಿಗಳು ಬಾಕಿಯಿವೆ, ಈ ಪ್ರಕ್ರಿಯೆ ನಡೆಯುತ್ತಿರುತ್ತದೆ, ಕುಮಾರಸ್ವಾಮಿಯವರು ಮಂಡ್ಯ ಮತ್ತ ರಾಜ್ಯಕ್ಕೆ ಒಳ್ಳೆಯದನ್ನು ಮಾಡುವ ಉದ್ದೇಶವಿಟ್ಟುಕೊಂಡಿದ್ದರೆ, ಕೇಂದ್ರದಿಂದ ಘೋಷಣೆಯಾಗಿರುವ ರಾಜ್ಯದ ಯೋಜನೆಗಳಿಗೆ ಅನುದಾನವನ್ನು ಬಿಡುಗಡೆ ಮಾಡಿಸಲಿ, ಅದರಲ್ಲೂ ವಿಶೇಷವಾಗಿ ನೀರಾವರಿ ಯೋಜೆನೆಗಳಿಗೆ ಹಣ ಬಿಡುಗಡೆ ಮಾಡಿಸಲಿ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸ್ವಾಮೀಜಿಗಳು ಹೇಳುತ್ತಿರುವುದರ ಹಿಂದೆ ಬಿಜೆಪಿ ನಾಯಕರ ಕೈವಾಡ ಇರಬಹುದು: ಎನ್ ಚಲುವರಾಯಸ್ವಾಮಿ  

Follow us on